HEALTH TIPS

ಕೇಂದ್ರದಿಂದ ಫಲಾನುಭವಿಗಳಿಗೆ ಸಿಗಲಿದೆ ₹6 ಸಾವಿರ: ಹೆಸರಿದೆಯೇ ನೋಡಿಕೊಳ್ಳಿ.

      ನವದೆಹಲಿ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದಾಗಲೇ 95 ಕೋಟಿ ರೂಪಾಯಿಗಳು 11.17 ಕೋಟಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಹಣವನ್ನು ಮಂಜೂರು ಮಾಡಿದ್ದು, ಈ ಬಾರಿಯೂ ಅದು ಮುಂದುವರೆಯುತ್ತಿದೆ.

       ಇದಾಗಲೇ ಆರು ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದ್ದು, ಏಳನೇ ಕಂತು ಡಿಸೆಂಬರ್ 1ರಂದು ಅರ್ಹ ಫಲಾನುಭವಿಗಳಿಗೆ ಸಿಗಲಿದೆ. ವಾರ್ಷಿಕವಾಗಿ ಆರು ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದ್ದು, ಡಿ.1ರಂದು 2 ಸಾವಿರ ರೂಪಾಯಿ ಸಿಗಲಿದೆ.

ಈ ಯೋಜನೆಯಡಿ ಹೆಸರು ನೋಂದಾಯಿಸಿದ ರೈತರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಆನ್​ಲೈನ್​ ಮೂಲಕ ಹೇಗೆ ನೋಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ… ನೆನಪಿರಲಿ.. ಅಧಿಕೃತ ವೆಬ್​ಸೈಟ್​ಗೆ ಮಾತ್ರ ಭೇಟಿ ಕೊಡಿ.

  • ಅಧಿಕೃತ ವೆಬ್ ಸೈಟ್ ಲಿಂಕ್​- https://pmkisan.gov.in/
  • ನಂತರ Farmers Corner section ಕ್ಲಿಕ್​ ಮಾಡಿ
  • Beneficiary list ಕ್ಲಿಕ್​ ಮಾಡಿ.
  • ಇದರಲ್ಲಿ ಕೇಳಿರುವ ರಾಜ್ಯ(state) ಜಿಲ್ಲೆ (district) ಉಪ ಜಿಲ್ಲೆ (sub district) ಬ್ಲಾಕ್ (block) ಗ್ರಾಮವನ್ನು (village) ನಮೂದಿಸಿ get report ಕ್ಲಿಕ್ಕಿಸಿ.
  • ಈ ಪ್ರಕ್ರಿಯೆ ಮಾಡಿದ ನಂತರ, ಇಲ್ಲಿರುವ ಎಲ್ಲಾ ಲಿಸ್ಟ್​ ನಿಮಗೆ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಪರಿಶೀಲಿಸಿ. ನಿಮ್ಮ ಹೆಸರು ಇದ್ದರೆ 2000 ರೂ ಸಿಗುತ್ತದೆ.ಹಣ ಸಂದಾಯದ ಬಗ್ಗೆ ಹೀಗೆ ನೋಡಿ…
  • ಒಂದು ವೇಳೆ ನಿಮ್ಮ ಹೆಸರು ಇದ್ದರೆ Beneficiary status ಕ್ಲಿಕ್​ ಮಾಡಿ ಹಣ ಸಂದಾಯ ಆಗಿದೆಯೇ ಇಲ್ಲವೇ ನೋಡಬಹುದು.
  • ಅದನ್ನು ನೋಡುವುದು ಹೀಗೆ ವೆಬ್​ಸೈಟ್ ಗೆ ಭೇಟಿ ನೀಡಿ - pmkisan.gov.in.
  • Farmers Corner section ಗೆ ಹೋಗಿ.
  • ನಂತರ . https://pmkisan.gov.in/BeneficiaryStatus.aspx ಕ್ಲಿಕ್​ ಮಾಡಿ
  • ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ

     ನಿಮ್ಮ ಹೆಸರು ಇಲ್ಲವೆ? ಹಾಗಿದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರನ್ನು ದಾಖಲಿಸಬಹುದು.

ಲ್ಯಾಂಡ್ ಲೈನ್ ಸಂಖ್ಯೆ - 011-24300606, 23381092, 23382401
ಟೋಲ್ ಫ್ರೀ ಸಂಖ್ಯೆ - 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 155261
ಸಹಾಯವಾಣಿ ಸಂಖ್ಯೆ - 0120-6025109
ಇಮೇಲ್ ID - pmkisan-ict@gov.in


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries