ಕಾಸರಗೋಡು: ದೇಶದ ಎಲ್ಲ ಸಂಸ್ಥೆಗಳ ಹಣಕಾಸು ಚಟುವಟಿಕೆಗಳ, ಚಟುವಟಿಕೆ ನಡೆಸುತ್ತಿರುವ ಮಂದಿಯ, ಮಾಲೀಕತ್ವದ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನಡೆಸಲಾಗುವ 7ನೇ ಆರ್ಥಿಕ ಗಣತಿ ಸಂಬಂಧ ಸಮೀಕ್ಷೆ ಚಟುವಟಿಕೆಗಳು ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿವೆ. ಕಿರು, ಮಧ್ಯಮ, ಬೃಹತ್ ಸಂಸ್ಥೆಗಳು, ಸ್ವ ಉದ್ಯೋಗ ಸಂಸ್ಥೆಗಳು, ಗುಡಿಕೈಗಾರಿಕೆಗಳು ಸಹಿತ ಎಲ್ಲ ಸಂಸ್ಥೆಗಳ ಮಾಹಿತಿ ಸಂಗ್ರಹಿಸುವುದು ಈ ಸಮೀಕ್ಷೆಯ ಉದ್ದೇಶ. 7ನೇ ಆರ್ಥಿಕ ಗಣನೆ ಸಂಬಂಧ ಕ್ಷೇತ್ರ ಮಟ್ಟದಲ್ಲಿ ಮಾಹಿತಿ ಸಂಗ್ರಹ ನಡೆಸುತ್ತಿರುವ ಸಿ.ಎಸ್.ಸಿ. ಏಜೆನ್ಸಿಗೆ ಸಾರ್ವಜನಿಕರು ಸಹಕರಿಸುವಂತೆ, ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.