HEALTH TIPS

ಇಂದು ಕೇರಳದಲ್ಲಿ 7025 ಮಂದಿಗೆ ಕೋವಿಡ್- ಮೃತರ ಸಂಖ್ಯೆ ದಾಟಿತು 1,500

           ತಿರುವನಂತಪುರ: ಕೇರಳದಲ್ಲಿ ಇಂದು 7025 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 8511 ಜನರನ್ನು ಗುಣಪಡಿಸಲಾಗಿದೆ. ಕೋವಿಡ್ ನಿಂದ ಇಂದು 28 ಸಾವುಗಳು ಸಂಭವಿಸಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 1512 ಕ್ಕೆ ಏರಿಕೆಯಾಗಿದೆ. ಪ್ರಸ್ತುತ, ರಾಜ್ಯದಲ್ಲಿ 89,675 ಜನರು ಕೋವಿಡ್  ಚಿಕಿತ್ಸೆ ಪಡೆಯುತ್ತಿದ್ದಾರೆ. 

            ಇಂದಿನ ಜಿಲ್ಲಾವಾರು ಮಾಹಿತಿ:

        ಎರ್ನಾಕುಳಂ 1042, ತ್ರಿಶೂರ್ 943, ಕೋಝಿಕ್ಕೋಡ್ 888, ಕೊಲ್ಲಂ 711, ಆಲಪ್ಪುಳ 616, ತಿರುವನಂತಪುರ 591, ಮಲಪ್ಪುರಂ 522, ಪಾಲಕ್ಕಾಡ್ 435, ಕೊಟ್ಟಾಯಂ 434, ಕಣ್ಣೂರು 306, ಪತ್ತನಂತಿಟ್ಟು 160, ಇಡುಕ್ಕಿ 148, ಕಾಸರಗೋಡು 143, ವಯನಾಡ್ 86 ಎಂಬಂತೆ ಸೋಂಕು ಬಾಧಿಸಿದೆ. 

               1,500 ದಾಟಿದ ಕೋವಿಡ್ ಮರಣ:

   ಇಂದು ರಾಜ್ಯದಲ್ಲಿ 28 ಸಾವುಗಳು ಕೋವಿಡ್  ಕಾರಣ ಸಂಭವಿಸಿದೆ. ತಿರುವನಂತಪುರ ಪೂವರ್ ನ ನಿರ್ಮಲಾ (62), ಎರಿಯಿನ್ಕುಳಿಯ ಸುಭದ್ರಾ (84), ಇಡವದ  ಗಿರೀಶ್ ಬಾಬು (71), ಪಲ್ಲಿಪುರಂನ ಆಂಟನಿ (55), ಕಾರ್ಯವಟ್ಟಂನ ಶೌಕತ್ ಅಲಿ (76),ಕೊಲ್ಲಂ   ಪೆÇೀಲಾಯಂನ ಮೊಹಮ್ಮದ್ ಬಶೀರ್ (72), ಚವರಾದ ಯೆಸುದಾಸನ್.(74), ಪಾರಪುರಂನ ಪಿಳ್ಳೆ(83), ಕೊಲ್ಲಂ ನ ರವೀಂದ್ರನ್(63), ಕೊಲ್ಲಂ ನ ಜೈರಾವಸ್(65), ಆಲಪ್ಪುಳ ಆರೂರ್ ನ ಕುಂಞÂ ಮೊಹಮ್ಮದ್ (71), ಸನಾತನಪುರಂ ನ ಗೋಪಿನಾಥನ್(74), ಎಡಕ್ಕಾಡ್ ನ ರವೀಂದ್ರನ್(67), ಎ.ಎನ್.ಪುರಂನ ನಾರಾಯಣ ಪೈ (88), ಎರ್ನಾಕುಳಂ ನ ಕೊಂಡನಾಡ್ ನ   ಆಂಟನಿ (75), ತ್ರಿಶೂರ್‍ನ ಶಂಕರನ್ (73), ವಾಲಾಪಾಡ್ ನ  ಶಾನವಾಸ್ (27), ಪಾಲಕ್ಕಾಡ್ ಶ್ರೀಕೃಷ್ಣಪುರಂನ  ಗೋವಿಂದನ್ (76), ಮಾಳಿಕ ಪರಂಬ್ ನ ಅಬ್ದುಲ್ ಸಮದ್ (37). ಮಲಪ್ಪುರಂ ನೀಲಂಬೂರಿನ ಮೊಹಮ್ಮದ್ (70), ಕೋಝಿಕ್ಕೋಡ್ ವಳಯಂ ನ ಮೊೈಯ್ದು ಹಾಜಿ(71), ವಡಗರದ ಕಾತ್ರ್ಯಾಯಿನಿ (74), ನಲ್ಲಾಲಂನ  ರಸಾಕ್ (62), ಕಣ್ಣೂರ್ ಪುನ್ನಾಡಿನ  ಪ್ರೇಮಲತ (72), ಕಣ್ಣೂರಿನ ಅಬೂಬಕ್ಕರ್ (56),ಪಾಪನಶ್ಚೇರಿಯ  ವನಜ (55), ಕಾರ್ಯಾಡ್ ನ ಮಾತು(75), ಚೇವ್ವ ನಿವಾಸಿ ಕದೀಜಾ(71) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1512 ಕ್ಕೆ ಏರಿಕೆಯಾಗಿದೆ. 

                 ನಕಾರಾತ್ಮಕ ಪ್ರಕರಣಗಳು

     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 8511 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 831, ಕೊಲ್ಲಂ 838, ಪತ್ತನಂತಿಟ್ಟು 208, ಆಲಪ್ಪುಳ 778, ಕೊಟ್ಟಾಯಂ 474, ಇಡುಕಿ 353, ಎರ್ನಾಕುಳಂ 808, ತ್ರಿಶೂರ್ 1049, ಪಾಲಕ್ಕಾಡ್ 390, ಮಲಪ್ಪುರಂ 890, ಕೋಝಿಕ್ಕೋಡ್ 1042, ವಯನಾಡ್ 132,ಕಣ್ಣೂರು 548, ಕಾಸರಗೋಡು 170 ಮಂದಿ ನೆಗೆಟಿವ್ ಆಗಿದೆ. ಇದರೊಂದಿಗೆ, 89,675 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 3,48,835 ಮಂದಿಯನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

              50,010 ಮಾದರಿಗಳ ಪರೀಕ್ಷೆ: 

        ಕಳೆದ 24 ಗಂಟೆಗಳಲ್ಲಿ 50,010 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ, ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿಬಿನಾಟ್, ಟ್ರುನಾಟ್  ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 46,95,059 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.


          


ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries