HEALTH TIPS

ಕೊರೋನಾಗೆ ಆಕ್ಸ್‌ಫರ್ಡ್ ಲಸಿಕೆ ಕೋವಿಶೀಲ್ಡ್ ಶೇ.70ರಷ್ಟು ಪರಿಣಾಮಕಾರಿ!

        ನವದೆಹಲಿ: ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಕೋವಿಶೀಲ್ಡ್ ಎರಡು ಪ್ರಯೋಗಗಳಲ್ಲಿ ಶೇಕಡ 70 ಪರಿಣಾಮಕಾರಿ ಎಂದು ಸಾಬೀತಾಗಿದೆ ಸ್ವೀಡಿಷ್-ಬ್ರಿಟಿಷ್ ಬಯೋಟೆಕ್ ಸಂಸ್ಥೆ ಅಸ್ಟ್ರಾಜೆನೆಕಾ ಸೋಮವಾರ ಪ್ರಕಟಿಸಿದೆ.

      ಕಂಪನಿಯು ಹಂಚಿಕೊಂಡ ವಿವರಗಳ ಪ್ರಕಾರ, ಒಟ್ಟು 131 ಕೋವಿಡ್ -19 ಕೊರೋನಾ ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ್ದು ಅವರಲ್ಲಿ ಯಾವುದಕ್ಕೂ ಗಂಭೀರವಾದ ಕಾಯಿಲೆ ಅಥವಾ ಆಸ್ಪತ್ರೆಯ ಅಗತ್ಯ ಕಾಣಿಸಲಿಲ್ಲ. ಜೊತೆಗೆ ಯಾವುದೇ ರೀತಿಯ ದುಷ್ಪರಿಣಾಮ ಬೀರಿಲ್ಲ ಎಂದು ತಿಳಿಸಿದೆ. ಈ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಬಹುದಾಗಿದೆ. ಅಡೆನೊವೈರಸ್ನಿಂದ ಅಭಿವೃದ್ಧಿಪಡಿಸಿದ ಲಸಿಕೆ ಜೊತೆ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಪಾಲುದಾರನಾಗಿದ್ದು ಕೋವಿಶೀಲ್ಡ್ ಭಾರತದಲ್ಲಿ ಲಭಿಸುವ ಮೊದಲ ಕೋವಿಡ್ -19 ಲಸಿಕೆಯಾಗುವ ಸಾಧ್ಯತೆಯಿದೆ.

       "ಈ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷತೆಯು ದೃಷ್ಟಿಯಿಂದ ಕೋವಿಡ್ -19 ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಲಿದೆ. ಈ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಕಂಪನಿಯ ಸಿಇಒ ಪ್ಯಾಸ್ಕಲ್ ಸೊರಿಯೊಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries