ತಿರುವನಂತಪುರ: ಕೋವಿಡ್ ಆತಂಕಗಳು ಮುಂದುವರಿಯುತ್ತಿರುವಂತೆ ಕೇರಳದಲ್ಲಿ ಇಂದು 7201 ಜನರಿಗೆ ಸೋಂಕು ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಮಾಹಿತಿಗಳನ್ನು ತಿಳಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ತೀವ್ರಗತಿಯ ಸೋಂಕು ವ್ಯಾಪಕತೆ ಮುಮದುವರಿದಿರುವುದು ಕಂಡುಬಂದಿದೆ.
ಇಂದು 28 ಕೋವಿಡ್ ಮೃತ್ಯು:
ರಾಜ್ಯದಲ್ಲಿ ಇಂದು 28 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ತಿರುವನಂತಪುರ ಕಾಟ್ಟಾಕಡದ ದಿನೇಶ್ ಕುಮಾರ್ (55), ಕಾಂಜಿರಾಮ್ಕುಳಂನ ದೇವರಾಜ್ (60), ಕೊಲ್ಲಂ ಕರುನಾಗಪ್ಪಳ್ಳಿಯ ಸೋಮನಾಥನ್ (64), ಕೊಲ್ಲನ ತಾಜುದ್ದೀನ್ (75), ಪತ್ತನಂತಿಟ್ಟು ಪೆರಿಂಗನಾಡಿನ ಬಿನುರಾಜ್ (42), ಪತ್ತನಂತಿಟ್ಟು ನಿವಾಸಿ ಮೊಹಮ್ಮದ್ ಮುಸ್ತಾಫ(81), ಕಡಂಬನ್ನಾಡಿನ ವಿ.ಎಂ. ಡೇನಿಯಲ್ (82), ಅಲಪ್ಪುಳದ ಜಾರ್ಜ್ (77), ಚೇರ್ತಲಾದ ಕ್ರಿಸ್ (30), ಚೇರ್ತಲ ನಿವಾಸಿ ಸೋಮಸುಂದರನ್ ಪಿಳ್ಳೈ (63), ಕರುವಾಟ್ಟಾದ ಬಾಲಕೃಷ್ಣನ್ (69), ಕೊಟ್ಟಾಯಂನ ಮುಲ್ಲಶ್ಚೇರಿಯ ಗೋಪಿನಾಥನ್ ನಾಯರ್ (57), ಎರ್ನಾಕುಳಂ ತೇವರದ ಅಮ್ಮಿಣಿ ಪುರುಷೋತ್ತಮನ್(63), ಪ್ಯಾಟಿಮಟ್ಟಂ ಮೂಲದ ಕೆ.ಎನ್.ಶಶಿ(66), ಈಸ್ಟ್ ಕೊಚ್ಚಿಯ ರಾಧಾಕೃಷ್ಣನ್(72), ವಾರಪ್ಪುಳದ ತಂಬಿ (59), ತೃಶೂರ್ ಮಿನಾಲೂರ್ ನ ಗೋಪಾಲನ್ (62), ಇರಿಂಞಲಕುಡದ ಶ್ರೀಧರನ್ (82), ಮುಂಡೂರಿನ ಬಿಂದು (48), ಮಲಪ್ಪುರಂ ಚೆಲಕಾಡವದ ತಾಮಿ (75), ಕುಳಕ್ಕಾವಿನ ಮೊಹಮ್ಮದ್ (70), ವಟ್ಟಲ್ಲೂರಿನ ಕುಂಞÂ ಮುಹಮ್ಮದ್ (80), ಕೋಝಿಕ್ಕೋಡ್ ಕಲರಿಕಲ್ ನ ಅಬೂಬಕರ್ (78), ಕಣ್ಣೂರು ಆತ್ತೂರಿನ ಸಿ.ಪಿ.ಅಬ್ದು(59), ಚೆಲಾಡ್ ಮೂಲದ ಅಬ್ದುಲ್ ಅಸೀಸ್(85), ತಳಿಪರಂಬಿನ ಮುಹಮ್ಮದ್ ಕುಂಞÂ (55), ಪಳಯಂಗಡಿಯ ಮರಿಯಮ್ (61), ಕತಿರೂರಿನ ನಫಿಸಾ (60) ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಈವರೆಗೆ 1668 ಮಂದಿ ಮೃತಪಟ್ಟಿದ್ದಾರೆ.
ಗುಣಮುಖರಾದವರ ಜಿಲ್ಲಾವಾರು ವಿವರ:
ಚಿಕಿತ್ಸೆ ಪಡೆದ 7120 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 761, ಕೊಲ್ಲಂ 562, ಪತ್ತನಂತಿಟ್ಟು 196, ಆಲಪ್ಪುಳ 549, ಕೊಟ್ಟಾಯಂ 612, ಇಡುಕ್ಕಿ 100, ಎರ್ನಾಕುಳಂ 1010, ತ್ರಿಶೂರ್ 423, ಪಾಲಕ್ಕಾಡ್ 286, ಮಲಪ್ಪುರಂ 1343, ಕೋಝಿಕ್ಕೋಡ್ 649, ವಯನಾಡ್ 106, ಕಣ್ಣೂರು 313, ಕಾಸರಗೋಡು 210 ಮಂದಿ ಗುಣಮುಯಖರಾಗಿದ್ದಾರೆ.
ಕೋವಿಡ್ ಧನಾತ್ಮಕ ಪ್ರಕರಣಗಳು:
ಇಂದು ಕೋವಿಡ್ 7201 ಪ್ರಕರಣಗಳು ದೃಢಪಡಿಸಿದ್ದರೆ, ಹೆಚ್ಚಿನ ಪ್ರಕರಣಗಳು ಎರ್ನಾಕುಳಂ ಜಿಲ್ಲೆಯಲ್ಲಿವೆ. ಎರ್ನಾಕುಲಂ 1042, ಕೋಝಿಕ್ಕೋಡ್ 971, ತ್ರಿಶೂರ್ 864, ತಿರುವನಂತಪುರ 719, ಆಲಪ್ಪುಳ 696, ಮಲಪ್ಪುರಂ 642, ಕೊಲ್ಲಂ 574, ಕೊಟ್ಟಾಯಂ 500, ಪಾಲಕ್ಕಾಡ್ 465, ಕಣ್ಣೂರು 266, ಪತ್ತನಂತಿಟ್ಟು 147, ವಯನಾಡ್ 113, ಇಡುಕ್ಕಿ 108, ಕಾಸರಗೋಡು 94 ಮಂದಿಗೆ ಪಾಸಿಟಿವ್ ಆಗಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು:
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಕೋವಿಡ್‍ನ ಹೊಸ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂದು ಬೆಳಿಗ್ಗೆ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 84.62 ಲಕ್ಷ ದಷ್ಟಿದೆ. 84,62,081 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ 5,16,632 ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ಈವರೆಗೆ 78,19,887 ಜನರನ್ನು ಗುಣಪಡಿಸಲಾಗಿದೆ ಮತ್ತು 1,25,562 ಜನರು ಮರಣಹೊಂದಿದ್ದಾರೆ.
ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು:
ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿದ್ದ ಮಹಾರಾಷ್ಟ್ರದಲ್ಲಿ ಈಗ ಕೋವಿಡ್ ಪ್ರಕರಣಗಳ ಕುಸಿತ ಕಂಡುಬಂದಿದೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ದೆಹಲಿ ರಾಜ್ಯಗಳಲ್ಲಿಯೂ ಸಹ ಸೋಂಕಿನ ಪ್ರಮಾಣ ಕಡಿಮೆ ಇದೆ. ಆದಾಗ್ಯೂ, ಕೇರಳದಲ್ಲಿ, ಪ್ರತಿದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಸಂಪರ್ಕ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಗುಣಮುಖರಾಗುವವರ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ದಿನಕ್ಕೆ ಸಾವಿನ ಪ್ರಮಾಣ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವ ಜನರ ಸಂಖ್ಯೆ ಹೆಚ್ಚಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯಲ್ಲಿ ಏರಿಕೆ ಮಾಡಲಾಗಿದೆ.
ಕಾಸರಗೋಡಿನ ಇಂದಿನ ಮಾಹಿತಿ:
ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 94 ಮಂದಿಗೆ ಕೋವಿಡ್ ಪಾಸಿಟಿವ್ : 210 ಮಂದಿಗೆ ಕೋವಿಡ್ ನೆಗೆಟಿವ್
: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 94 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 210 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ವಿವರಗಳು:
ಪಾಸಿಟಿವ್ ಆದವರಲ್ಲಿ 89 ಮಂದಿಗೆ ಸಂಪರ್ಕ ಮೂಲಕ ಸಓಂಕು ತಗುಲಿದೆ. 3 ಮಂದಿ ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಆಗಮಿಸಿದವರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 3, ಪುತ್ತಿಗೆ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 2, ಕುಂಬಳೆ ಪಂಚಾಯತ್ 1, ಕಾರಡ್ಕ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 1, ಚೆಂಗಳ ಪಂಚಾಯತ್ 4, ಬದಿಯಡ್ಕ ಪಂಚಾಯತ್ 1, ಕಾಞಂಗಾಡ್ ನಗರಸಭೆ 12, ಉದುಮಾ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 5, ಪನತ್ತಡಿ ಪಂಚಾಯತ್ 7, ಪಳ್ಳಿಕ್ಕರೆ ಪಂಚಾಯತ್ 2, ಮಡಿಕೈ ಪಂಚಾಯತ್ 4, ಕಳ್ಳಾರ್ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 4, ಬಳಾಲ್ ಪಂಚಾಯತ್ 1, ಅಜಾನೂರು ಪಂಚಾಯತ್ 4, ನೀಲೇಶ್ವರ ಪಂಚಾಯತ್ 9, ವೆಸ್ಟ್ ಏಳೇರಿ ಪಂಚಾಯತ್ 5, ತ್ರಿಕರಿಪುರ ಪಂಚಾಯತ್ 2, ಪುಲ್ಲೂರು-ಪೆರಿಯ ಪಂಚಾಯತ್ 2, ಕೋಡೋಂ-ಬೇಲೂರು ಪಂಚಾಯತ್ 3, ಕಿನಾನೂರು-ಕರಿಂದಲಂ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 5, ಪುತ್ತಿಗೆ ಪಂಚಾಯತ್ 2, ಮುಳಿಯಾರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಮಂಜೇಶ್ವರ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 4, ಕುತ್ತಿಕೋಲು ಪಂಚಾಯತ್ 4, ಕುಂಬಳೆ ಪಂಚಾಯತ್ 7, ಕುಂಬಡಾಜೆ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 10, ದೇಲಂಪಾಡಿ ಪಂಚಾಯತ್ 1, ಚೆಂಗಳ ಪಂಚಾಯತ್ 23, ಚೆಮ್ನಾಡ್ ಪಂಚಾಯತ್ 3, ಬದಿಯಡ್ಕ ಪಂಚಾಯತ್ 4, ಕಾಞಂಗಾಡ್ ನಗರಸಭೆ 8, ಅಜಾನೂರು ಪಂಚಾಯತ್ 9, ಬಳಾಲ್ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 21, ಪಿಲಿಕೋಡ್ ಪಂಚಾಯತ್ 5, ಪನತ್ತಡಿ ಪಂಚಾಯತ್ 3, ಪಳ್ಳಿಕ್ಕರೆ ಪಂಚಾಯತ್ 2, ಪಡನ್ನ ಪಂಚಾಯತ್ 4, ಕಳ್ಳಾರ್ ಪಂಚಾಯತ್ 5, ನೀಲೇಶ್ವರ ನಗರಸಭೆ 25, ಕೋಡೋಂ-ಬೇಳೂರು ಪಂಚಾಯತ್ 4, ಕಿನಾನೂರು-ಕರಿಂದಳಂ ಪಂಚಾಯತ್ 6, ಕಯ್ಯೂರು-ಚೀಮೇನಿ ಪಂಚಾಯತ್ 11, ಈಸ್ಟ್ ಏಳೇರಿ ಪಂಚಾಯತ್ 4, ಆಲಂಪ್ಪಡಂಬ ಪಂಚಾಯತ್ 1, ತಾಮನ್ ತಳಿ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನಿಗಾ :
ಕಾಸರಗೋಡು ಜಿಲ್ಲೆಯಲ್ಲಿ 4591 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3985 ಮಂದಿ ಮನೆಗಳಲ್ಲಿ, 606 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತನವಾಗಿ 137 ಮಂದಿ ನಿಗಾ ಪ್ರವೇಶಿಸಿದ್ದಾರೆ. 301 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1272 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 252 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ:
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 19556 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 17823 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 982 ಮಂದಿ ವಿದೇಶಗಳಿಂದ, 751 ಮಂದಿ ಇತರ ರಾಜ್ಯಗಳಿಂದ ಬಂದವರು. ಈ ವರೆಗೆ ಒಟ್ಟು 17817 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.