ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 81 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 157 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದ ಪಂಚಾಯತಿಗಳ ವಿವರ:
ಪಾಸಿಟಿವ್ ಆದವರಲ್ಲಿ 75 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 5 ಮಂದಿ ಇತರ ರಾಜ್ಯಗಳಿಂದ, ಒಬ್ಬರು ವಿದೇಶದಿಂದ ಬಂದವರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 2, ಮಧೂರು ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 6, ಕುಂಬಳೆ ಪಂಚಾಯತ್ 2, ಎಣ್ಮಕಜೆ ಪಂಚಾಯತ್ 2, ಚೆಂಗಳ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 5, ಕಾಞಂಗಾಡ್ ನಗರಸಭೆ 10, ಉದುಮಾ ಪಂಚಾಯತ್ 7, ಪಿಲಿಕೋಡ್ ಪಂಚಾಯತ್ 3, ಪಳ್ಳಿಕ್ಕರೆ ಪಂಚಾಯತ್ 5, ಪಡನ್ನ ಪಂಚಾಯತ್ 2, ಮಡಿಕೈ ಪಂಚಾಯತ್ 2, ಕಳ್ಳಾರ್ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 10, ಅಜಾನೂರು ಪಂಚಾಯತ್ 1, ನೀಲೇಶ್ವರ ನಗರಸಭೆ 4, ತ್ರಿಕರಿಪುರ ಪಂಚಾಯತ್ 5, ಪುಲ್ಲೂರು-ಪೆರಿಯ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 3 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 2, ಮಧೂರು ಪಂಚಾಯತ್ 5, ಪುತ್ತಿಗೆ ಪಂಚಾಯತ್ 1, ಪೈವಳಿಕೆ ಪಂಚಾಯತ್ 1, ಮುಳಿಯಾರು ಪಂಚಾಯತ್ 2, ಮಂಜೇಶ್ವರ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 2, ಕುಂಬಳೆ ಪಂಚಾಯತ್ 12, ಕಾರಡ್ಕ ಪಂಚಾಯತ್ 1, ಚೆಂಗಳ ಪಂಚಾಯತ್ 3, ಚೆಮ್ನಾಡ್ ಪಂಚಾಯತ್ 3, ಬೆಳ್ಳೂರು ಪಂಚಾಯತ್ 1, ಬೇಡಡ್ಕ ಪಂಚಾಯತ್ 6, ಕಾಞಂಗಾಡ್ ನಗರಸಭೆ 14, ಅಜಾನೂರು ಪಂಚಾಯತ್ 3, ಬಳಾಲ್ ಪಂಚಾಯತ್ 5, ಚೆರುವತ್ತೂರು ಪಂಚಾಯತ್ 6, ಕಳ್ಳಾರ್ ಪಂಚಾಯತ್ 5, ಇದಿಮಾ ಪಂಚಾಯತ್ 5, ಪನತ್ತಡಿ ಪಂಚಾಯತ್ 4, ಪಳ್ಳಿಕ್ಕರೆ ಪಂಚಾಯತ್ 8, ಮಡಿಕೈ ಪಂಚಾಯತ್ 5, ನೀಲೇಶ್ವರ ನಗರಸಭೆ 1, ವೆಸ್ಟ್ ಏಳೇರಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 13, ಪುಲ್ಲೂರು-ಪೆರಿಯ ಪಂಚಾಯತ್ 4, ಕೋಡೋಂ-ಬೇಳೂರು ಪಂಚಾಯತ್ 4, ಕಿನಾನೂರು-ಕರಿಂದಳಂ ಪಂಚಾಯತ್ 28, ಕಯ್ಯೂರು-ಚೀಮೇನಿ ಪಂಚಾಯತ್ 5, ಕರಿವೆಳ್ಳೂರು ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನಿಗಾ ಮಾಹಿತಿ:
ಕಾಸರಗೋಡು ಜಿಲ್ಲೆಯಲ್ಲಿ 6038 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5484 ಮಂದಿ, ಸಾಂಸ್ಥಿಕವಾಗಿ 554 ಮಂದಿ ನಿಗಾದಲ್ಲಿರುವರು. ನೂತನವಾಗಿ ಶುಕ್ರವಾರ 568 ಮಂದಿ ನಿಗಾ ಪ್ರವೇಶಿಸಿದ್ದಾರೆ. 346 ಮಂದಿ ಶುಕ್ರವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1034 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 195 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ:
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 20201 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 18431 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 992 ಮಂದಿ ವಿದೇಶಗಳಿಂದ, 778 ಮಂದಿ ಇತರ ರಾಜ್ಯಗಳಿಂದ ಬಂದವರು. ಈ ವರೆಗೆ ಒಟ್ಟು 18169 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 212 ಆಗಿದೆ. ಪ್ರಸ್ತುತ 1370 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ.