ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 86 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 82 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್
ಪಾಸಿಟಿವ್ ಆದವರಲ್ಲಿ 76 ಮಂದಿಗೆ ಸಂಪರ್ಕ ಮೂಲಕ ಸಓಂಕು ತಗುಲಿದೆ. 10 ಮಂದಿ ವಿದೇಶಗಳಿಂದ ಆಗಮಿಸಿದವರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆ ಮಟ್ಟದ ಗಣನೆ: ಕಾಸರಗೋಡು ನಗರಸಭೆ 1, ಮುಳಿಯಾರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಮಂಜೇಶ್ವರ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 3, ಕುಂಬಳೆ ಪಂಚಾಯತ್ 4, ಕುಂಬಡಾಜೆ ಪಂಚಾಯತ್ 1, ಚೆಮ್ನಾಡ್
ಪಂಚಾಯತ್ 5, ಕಾಞಂಗಾಡ್ ನಗರಸಭೆ 18, ಅಜಾನೂರು ಪಂಚಾಯತ್ 1, ಬಳಾಲ್ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 3, ಮಡಿಕೈ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 3, ಪಳ್ಳಿಕ್ಕರೆ ಪಂಚಾಯತ್ 3, ಉದುಮಾ ಪಂಚಾಯತ್ 5, ನೀಲೇಶ್ವರ ನಗರಸಭೆ 25, ವೆಸ್ಟ್ ಏಳೇರಿ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1, ಕಿನಾನೂರು-ಕರಿಂದಲಂ ಪಂಚಾಯತ್ 4, ಕಯ್ಯೂರು-ಚೀಮೇನಿ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 3 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ: ಕಾಸರಗೊಡು ನಗರಸಭೆ 1, ಮಧೂರು ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 1, ಕುತ್ತಿಕೋಲು ಪಂಚಾಯತ್ 8, ಕುಂಬಳೆ ಪಂಚಾಯತ್ 1, ಕುಂಬ್ಡಾಜೆ ಪಂಚಾಯತ್ 2, ಕಾರಡ್ಕ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 3, ಚೆಮ್ನಾಡ್ ಪಂಚಾಯತ್ 3, ಬೇಡಡ್ಕ ಪಂಚಾಯತ್ 8, ಬದಿಯಡ್ಕ ಪಂಚಾಯತ್ 1, ಕಾಞಂಗಾಡ್ ನಗರಸಭೆ 2, ಅಜಾನೂರು ಪಂಚಾಯತ್ 2, ಬಳಾಲ್ ಪಂಚಾಯತ್ 12, ಚೆರುವತ್ತೂರು ಪಂಚಾಯತ್ 1, ಕಳ್ಳಾರ್ 11, ಪಳ್ಳಿಕ್ಕರೆ ಪಂಚಾಯತ್ 2, ಪನತ್ತಡಿ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 2, ಉದುಮಾ ಪಂಚಾಯತ್ 6,ನೀಲೇಶ್ವರ ನಗರಸಭೆ 2, ವೆಸ್ಟ್ ಏಳೇರಿ ಪಂಚಾಯತ್ 1, ವಲಿಯಪರಂಬ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ನಿಗಾ ಕಾಸರಗೋಡು ಜಿಲ್ಲೆಯಲ್ಲಿ 7995 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 7497 ಮಂದಿ ಮನೆಗಳಲ್ಲಿ, 498 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 369 ಮಂದಿ ನಿಗಾ ಪ್ರವೇಶಿಸಿದ್ದಾರೆ. 661 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 165 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 41 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಒಟ್ಟು ಗಣನೆ
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 21900 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 20023 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 1053 ಮಂದಿ ವಿದೇಶಗಳಿಂದ, 824 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 20580 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 1087 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 233 ಆಗಿದೆ. ಮಧೂರು ಗ್ರಾಮ ಪಂಚಾಯತ್ ನಿವಾಸಿ ಸುದರ್ಶನ(50) ಎಂಬವರು ಮರಣ ಕೋವಿಡ್ ಬಾಧೆಯಿಂದ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.