ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ( ಎಲ್ ಒಸಿಯಲ್ಲಿ) ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದ ಭಾರತೀಯ ಸೇನಾಪಡೆ ಎರಡು- ಮೂರು ಪಾಕ್ ಸೇನೆಯ ಎಸ್ ಎಸ್ ಜಿ ಕಮಾಂಡೋ ಸೇರಿದಂತೆ 8 ಮಂದಿ ಸೈನಿಕರನ್ನು ಹತ್ಯೆ ಮಾಡಿದೆ.
ಪಾಕ್ ಸೇನೆಯ ಅಪಾರ ಪ್ರಮಾಣದ ಬಂಕರ್ ಗಳು, ಇಂಧನ ಡಂಪಿಂಗ್ ಮತ್ತು ಕಾರ್ಯಸ್ಥಳಗಳನ್ನು ಭಾರತೀಯ ಸೇನೆ ನಾಶಪಡಿಸಿದ್ದು, ಘಟನೆಯಲ್ಲಿ 10-12 ಪಾಕ್ ಯೋಧರು ಗಾಯಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೂ ಮುನ್ನ ನೆರೆಯ ರಾಷ್ಟ್ರದಿಂದ ಕದನ ವಿರಾಮ ಉಲ್ಲಂಘನೆ ಹಾಗೂ ಪಾಕ್ ಮೂಲದ ಉಗ್ರರ ಒಳನಸುಳುವಿಕೆ ತಡೆಯುವ ಪ್ರಯತ್ನದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾದರು. ಉರಿ ವಲಯದಲ್ಲಿ ಇಬ್ಬರು ಹಾಗೂ ಗುರೆಜ್ ಸೆಕ್ಟರ್ ನಲ್ಲಿ ಒಬ್ಬರು ಹುತಾತ್ಮರಾಗಿರುವುದಾಗಿ ಸೇನಾ ಮೂಲಗಳು ಮಾಹಿತಿ ನೀಡಿವೆ.