ಬೆಂಗಳೂರು: ಇತ್ತೀಚಿನ ಅಧ್ಯಯನದ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ ಒಂಬತ್ತು ದಿನಗಳಲ್ಲಿ ರೋಗಿಗಳಿಗೆ 'ರೆಮಿಡಿಸಿವಿರ್' ನೀಡುವುದರಿಂದ ಕೋವಿಡ್ -19 ರೋಗಿಗಳಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗಿದೆ. ಅಕ್ಟೋಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ರೆಮಿಡಿಸಿವಿರ್, ಆಸ್ಪತ್ರೆಗೆ ದಾಖಲಾದ ರೋಗಿಗಳ ಮೇಲೆ "ಅತ್ಯಂತ ಕಡಿಮೆ ಅಥವಾ ಯಾವ ಪರಿಣಾಮವನ್ನೂ" ಬೀರುವುದಿಲ್ಲ. ಎಂದಿತ್ತು ಆದರೆ ಜಯನಗರದ ಅಪೊಲೊ ಆಸ್ಪತ್ರೆಯ ವೈದ್ಯರು ನಡೆಸಿದ ಅಧ್ಯಯನದಲ್ಲಿ 'ರೆಮಿಡಿಸಿವಿರ್' ನೀಡಲಾದ ರೋಗಿಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ.
ಡಾ. ಸಮೀರ್ ಬನ್ಸಾಲ್, ಡಾ.ಸುಹಿಥಾ ಬಿಸಾನಿ ಡಾ. ಹರಿಪ್ರಸಾದ್ ಕಲ್ಪಕಂ ಮತ್ತು ಡಾ.ರವೀಂದ್ರ ಮೆಹ್ತಾ ಅವರುಗಳು ನಡೆಸಿದ ಅಧ್ಯಯನ ವರದಿ ನವೆಂಬರ್ 10 ರಂದು ಆರೋಗ್ಯ ಸಂಶೋಧನೆಯ ಪ್ರಿ ಪ್ರಿಂಟ್ಸ್ ಗಳನ್ನು ಮುದ್ರಿಸುವ ವೇದಿಕೆ "medRxiv" ನಲ್ಲಿ ಪ್ರಕಟವಾಗಿದೆ.ಇದೇ ವೇದಿಕೆಯಲ್ಲಿ ಡಬ್ಲ್ಯುಎಚ್‌ಒ ಅಧ್ಯಯನವೂ ಸಹ ಪ್ರಕಟವಾಗಿದೆ.
ಅಪೊಲೊ ಆಸ್ಪತ್ರೆಯ ವೈದ್ಯರು ಜೂನ್ 25 ಮತ್ತು ಅಕ್ಟೋಬರ್ 3 ರ ನಡುವೆ ಮಧ್ಯಮದಿಂದ ತೀವ್ರವಾದ ರೋಗಲಕ್ಷಣಗಳ ಹೊಂದಿದ್ದ 346 ರೋಗಿಗಳ ಆರೋಗ್ಯ ದಾಖಲೆಗಳನ್ನು (ಅದರಲ್ಲಿ 270 ಅಥವಾ 78% ಪುರುಷರು 24-94 ವಯಸ್ಸಿನವರು) ಮರುಪರಿಶೀಲಿಸಿದ್ದಾರೆ. ಅಧ್ಯಯನಕ್ಕೆ ಆಯ್ಕೆಯಾದ ರೋಗಿಗಳಲ್ಲಿ 109 ಮಂದಿ ಮಧ್ಯಮ ರೋಗಲಕ್ಷಣಗಳನ್ನು ಹೊಂದಿದ್ದರು 237 ಮಂದಿಯಲ್ಲಿ ಕೋವಿಡ್ -19 ತೀವ್ರತರದ ಲಕ್ಷಣಗಳಿದೆ. . ರೋಗಲಕ್ಷಣಗಳು ಪ್ರಾರಂಭವಾದ ಒಂಬತ್ತು ದಿನಗಳಲ್ಲಿ 260 ರೋಗಿಗಳಿಗೆ 'ರೆಮಿಡಿಸಿವಿರ್' ನೀಡಲಾಗಿದ್ದು , 86 ಮಂದಿಗೆ 9 ದಿನಗಳ ನಂತರದಲ್ಲಿ ನೀಡಲಾಗಿತ್ತು.
ಒಟ್ಟು 76 ರೋಗಿಗಳು (22%), ಪೈಕಿ 73 ಮಂದಿ ತೀವ್ರತರವಾದ ಪ್ರಕರಣಗಳನ್ನು ವರದಿ ಮಾಡಿದ್ದವರು ಒಟ್ಟಾರೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಂಡ ಒಂಬತ್ತು ದಿನಗಳಲ್ಲಿ 'ರೆಮಿಡಿಸಿವಿರ್' ನೀಡಿದ 260 ಜನರಲ್ಲಿ 47 ರೋಗಿಗಳು (18%) ಮಾತ್ರವೇ ಸಾವನ್ನಪ್ಪಿದ್ದಾರೆ. ಅದೇ ರೀತಿ . ರೋಗಲಕ್ಷಣದ ಒಂಬತ್ತು ದಿನಗಳ ನಂತರ 'ರೆಮಿಡಿಸಿವಿರ್'ನೀಡಿದ್ದ 86 ರೋಗಿಗಳಲ್ಲಿ 29 ರೋಗಿಗಳು (34%) ಸಾವನ್ನಪ್ಪಿದರು. ಔಷಧಿನಿಡುವಿಕೆ ಅವಧಿಯ ಮಧ್ಯಂತರದಲ್ಲಿ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಇದೆ ಎನ್ನುವುದನ್ನು ಅಧ್ಯಯನ ಪತ್ತೆ ಮಾಡಿದೆ.
"ಅಧ್ಯಯನವನ್ನು ಕೈಗೊಳ್ಳುವ ಆಲೋಚನೆ ಹಿಂದೆ ಚಿಕಿತ್ಸಾ ವಿಧಾನದ ಪರಿಣಾಮಕಾರಿತ್ವವನ್ನು ಪರಿಶೀಲಿಸುಅ ಉದ್ದೇಶವಿದೆ. ಏಕೆಂದರೆ ಇದನ್ನು ಪ್ರಶ್ನಿಸಲಾಗಿತ್ತು. ರೋಗಲಕ್ಷಣಗಳು ಪ್ರಾರಂಭವಾದ ಒಂಬತ್ತು ದಿನಗಳಲ್ಲಿ ಔಷಧಿಗಳನ್ನು ನೀಡಿದ ರೋಗಿಗಳಲ್ಲಿ ಇದು ಪರಿಣಾಮಕಾರಿಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಒಬ್ಬರು ಮೊದಲೇ ವರದಿ ಮಾಡಿದರೆ ಮತ್ತು ಔಷಧಿಗಳನ್ನು ಅವರಿಗೆ ತಕ್ಶ್ಃಅಣ ನೀಡೀದ್ದಾದರೆ ಅವರು ಚೇತರಿಸಿಕೊಳ್ಳುವುದು ಸಾಧ್ಯ ಹಾಗೂ ಮರಣ ಪ್ರಮಾಣ ಅತ್ಯಂತ ಕಡಿಮೆ ಇರಲಿದೆ. ”ಎಂದು ಅಪೊಲೊ ಆಸ್ಪತ್ರೆಗಳ ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಮೆಹ್ತಾ ಹೇಳಿದರು.