ಬದಿಯಡ್ಕ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಒಂದು ದಿನದ ತೆಂಕುತಿಟ್ಟು ಬಣ್ಣದ ವೇಷದ ಕಮ್ಮಟ ಹಾಗೂ ದಾಖಲೀಕರಣ ನವಂಬರ್ 9 ರಂದು ಸೋಮವಾರ ಕೊಲ್ಲಂಗಾನ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಜರಗಲಿದೆ. ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಸಹಕಾರ ನೀಡಲಿದೆ.
ಅಂದು ಬೆಳಿಗ್ಗೆ 10 ಕ್ಕೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಡಾ.ಶಿವರಾಮ ಕಾರಂತರ ಬಾಲವನ ಪುತ್ತೂರು ಸಂಸ್ಥೆಯ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಉದ್ಘಾಟಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಎಸ್ ಹೆಚ್.ಶಿವರುದ್ರಪ್ಪ , ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರುಗಳಾದ ರಾಧಾಕೃಷ್ಣ ಕಲ್ಚಾರ್, ಯೋಗೀಶ ರಾವ್ ಚಿಗುರುಪಾದೆ, ನವನೀತ ಶೆಟ್ಟಿ ಕದ್ರಿ, ಸಹಸದಸ್ಯ ದಾಮೋದರ ಶೆಟ್ಟಿ ಮೂಡಂಬೈಲು ಭಾಗವಹಿಸುವರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಉಪಸ್ಥಿತರಿರುವರು.
ಸಂಜೆ 5 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇರಳ ಸರ್ಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಎಂ.ಶಂಕರ ರೈ ಮಾಸ್ತರ್, ಸದಸ್ಯ ಸತೀಶ ಅಡಪ ಸಂಕಬೈಲು, ಡಾ.ಶ್ರುತಕೀರ್ತಿರಾಜ್ ಉಜಿರೆ, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಕಲಾಪೆÇೀಷಕ ಮಂಜುನಾಥ ಡಿ.ಮಾನ್ಯ ಭಾಗವಹಿಸುವರು.
ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಲಕ್ಷ್ಮೀನಾರಾಯಣ ರಾವ್ ಅಡೂರು, ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ, ಮುರಾರಿ ಭಟ್ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ಕೆ. ಗೋವಿಂದ ಭಟ್ ಸೂರಿಕುಮೇರಿ, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ರಮೇಶ ಶೆಟ್ಟಿ ಬಾಯಾರು, ರಮೇಶ ಭಟ್ ಸರವು, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗಣಾಧಿರಾಜ ಉಪಾಧ್ಯಾಯ, ಹರಿನಾರಾಯಣ ಎಡನೀರು, ಶಂಭಯ್ಯ ಭಟ್ ಕಂಜರ್ಪಣೆ, ಹರೀಶ್ ಶೆಟ್ಟಿ ಮಣ್ಣಾಪು, ರವಿರಾಜ ಪನೆಯಾಲ, ಜಯರಾಮ ಪಾಟಾಳಿ ಪಡುಮಲೆ, ಮಾಧವ ಪಾಟಾಳಿ ನೀರ್ಚಾಲು, ಮನೀಶ್ ಪಾಟಾಳಿ ಎಡನೀರು, ಕಿಶನ್ ಅಗ್ಗಿತ್ತಾಯ, ಶ್ರೀಗಿರಿ, ಸ್ವಸ್ಥಿಕ್, ಉಪಾಸನಾ ಪಂಜರಿಕೆ ಭಾಗವಹಿಸುವರು. ವರ್ಣ ಸ್ಟುಡಿಯೋ ನೀರ್ಚಾಲ್ ವೀಡಿಯೋ ದಾಖಲೀಕರಣ ಗೈಯಲಿದ್ದು ಕೊಲ್ಲಂಗಾನ ಮೇಳ ವೇಷಭೂಷಣ ಪೂರೈಸಲಿದ್ದಾರೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.