ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನಾ ಹಗರಣದ ಆರೋಪಿ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ರನ್ನು ಇಂದು ಬಂಧಿಸಿದ ನಾಟಕೀಯ ಘಟನೆ ನಡೆದಿದೆ.
ಕಾಸರಗೋಡು ಎಸ್‌ಪಿ ಕಚೇರಿಯಲ್ಲಿ ಇಂದು ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಬಂಧಿಸಲಾಯಿತು. 15 ಕೋಟಿ ರೂ.ಗಳ ಹಗರಣ ನಡೆದಿದ್ದು, ಶಾಸಕರ ವಿರುದ್ಧ ಸಾಕ್ಷ್ಯಗಳು ಬಂದಿವೆ ಎಂದು ಎಎಸ್ಪಿ ವಿವೇಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ಈ ಹಿಂದೆ 37 ಎಫ್‌ಐಆರ್‌ಗಳಲ್ಲಿ 13 ಕೋಟಿ ರೂ.ಗಳ ಮೌಲ್ಯದ ವಂಚನೆಯ ಪುರಾವೆಗಳು ದೊರೆತಿವೆ ಮತ್ತು ಇಂದು ಬಂಧಿಸಲಾಗುವುದು ಎಂದು ಎಎಸ್‌ಪಿ ತಿಳಿಸಿದ್ದರು. ಆದರೆ ಕಮರುದ್ದೀನ್ ವಿಚಾರಣಾ ತಂಡಕ್ಕೆ ತಾನು ತಪ್ಪೆಸಗಿಲ್ಲ ಮತ್ತು ಸಂಸ್ಥೆಯ ಎಂಡಿ ಮತ್ತು ನಿರ್ದೇಶಕರು ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದರು.