ನವದೆಹಲಿ: 15ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021 -22 ರಿಂದ 2025 - 26 ರ ಅವಧಿಯ ವರದಿಯ ಪ್ರತಿಯನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.
ಆಯೋಗವು ತನ್ನ ವರದಿಯನ್ನು 4 ನವೆಂಬರ್, 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದು, ಇಂದು ಪ್ರಧಾನಿಯವರಿಗೆ ಸಲ್ಲಿಸಲಾಗಿದೆ. ನಾಳೆ ಆಯೋಗದ ವರದಿಯನ್ನು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಾಗುತ್ತದೆ.
ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್, ಸದಸ್ಯರಾದ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಹಾಗೂ ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹತಾ ಈ ಸಂದರ್ಭದಲ್ಲಿ ಇದ್ದರು.
ಸಂವಿಧಾನದಡಿ ನಿಗದಿಪಡಿಸಿದಂತೆ ಈ ವರದಿಯನ್ನು ಕ್ರಮಕೈಗೊಂಡ ವರದಿ ರೂಪದ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸದನದಲ್ಲಿ ಮಂಡಿಸಲಾಗುವುದು.