ಕಾಸರಗೋಡು: ಅಪಾಯಕಾರಿ ಸ್ಥಿತಿಯಲ್ಲಿರುವ ಕಾಯರ್ಂಗೋಡು ಸೇತುವೆಯ ದುರಸ್ತಿ ಕಾಮಗಾರಿ ಶೀಘ್ರದಲ್ಲಿ ನಡೆಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಟೆಂಡರ್ ಕೋರಿಕೆ ನಡೆಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸೇತುವೆಯ ದುರಸ್ತಿಗೆ ಮುಂದಾಗುತ್ತಿಲ್ಲ. ಆದರೆ 3 ಕೋಟಿ ರೂ. ನ ಎಸ್ಟಿಮೇಟ್ ಸಲ್ಲಿಸಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಪ್ರಧಾನ ಸೇತುವೆಗಳಲ್ಲಿ ಒಂದಾಗಿರುವ ಕಾಯರ್ಂಗೋಡು ಸೇತುವೆಯ ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸಭೆ ಒಮ್ಮತದಿಂದ ಆಗ್ರಹಿಸಿದೆ. ಸೇತುವೆಯ ಎರಡೂ ಬದಿಗಲಲ್ಲಿ ಜಾಗ್ರತೆ ಸೂಚಕ ಫಲಕ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಸಬೆಯಲ್ಲಿ ಶಾಸಕ ಎಂ.ರಾಜಗೋಪಾಲನ್ ನಿರ್ಣಯ ಮಂಡಿಸಿದರು. ಶಾಸಕ ಎಂ.ಸಿ.ಕಮರುದ್ದೀನ್ ಬೆಂಬಲಿಸಿದರು. ಶಾಸಕರಾದ ಕೆ.ಕುಂuಟಿಜeಜಿiಟಿeಜರಾಮನ್, ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಶೀಘ್ರದಲ್ಲಿ ನಡೆಸುವಂತೆ ಒತ್ತಾಯಿಸಿದರು.
ಮಂಡಿಸಲಾದ ಇತರ ಬೇಡಿಕೆಗಳು:
ಚಟ್ಟಂಚಾಲಿನ ಟಾಟಾ ಕೋವಿಡ್ ಆಸ್ಪತ್ರೆಯನ್ನು ಗಂಭೀರ ಸ್ಥಿತಿಯಲ್ಲಿರುವ ಸಿ ಕ್ಯಾಟಗರಿಯ ರೋಗಳ ಸಹಿತ ಮಂದಿಯ ಚಿಕಿತ್ಸೆಗೆ ಪೂರ್ಣರೂಪದಲ್ಲಿ ಸಿದ್ಧಗೊಳಿಸುವಂತೆ ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು. ಸಂಸದರ ಪ್ರತಿನಿಧಿ ಗೋವಿಂದನ್ ನಾಯರ್ ಈ ವಿಚಾರ ಮಂಡಿಸಿದರು.
ಕಾಸರಗೋಡು ಮೆಡಿಕಲ್ ಕಾಲೇಜಿಗೆ ಕಿಫ್ ಬಿಯ ನಿಧಿ ಒದಗಿಸಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ನಿರ್ಣಯ ಮಂಡಿಸಿದರು. 190 ಕೋಟಿ ರೂ.ನ ಎಸ್ಟಿಮೇಟ್ ಜಿಲ್ಲಾ ವೈದ್ಯಧಿಕಾರಿ ಕಿಫ್ ಬಿಗೆ ಸಲ್ಲಿಸಿದ್ದಾರೆ. ನ.2ರಂದು ಈ ಸಂಬಂಧ ಮಾತುಕತೆ ನಡೆಸಲು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಚೆರ್ಕಳ ನೆಲ್ಲಿಕಟ್ಟೆ ರಾಜ್ಯ ಹೆದ್ದಾರಿ ದುಸರ್ತಿ ಕಾಮಗಾರಿ ತ್ವರಿತಗೊಳಿಸುವಂತೆ ಶಾಸಕ ಎಂ.ಸಿ.ಕಮರುದ್ದೀನ್ ಆಗ್ರಹಿಸಿದರು. ಜನಪ್ರತಿನಿಧಿಗಳೂ ಇದಕ್ಕೆ ಧ್ವನಿ ಸೇರಿಸಿದರು. ಈ ಸಂಬಂಧ ಶೀಘ್ರದಲ್ಲೇ ವಿಶೇಷಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ವಲಿಯಪರಂಬದ ಕಡಕ್ಕೊರೆತದ ತೀವ್ರತೆ ತಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ರೀತ್ಯಾ ಸಾಶ್ವತ ಪರಿಹಾರ ಸಂಬಮಧ ನೀರಾವರಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ಅವರಿಗೆ ಸಭೆ ಆದೇಶ ನೀಡಿದೆ. ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ನಿಧಿ ಲಭ್ಯತೆಗೆ ಕ್ರಮಕೈಗೊಳ್ಳಲೂ ತಿಳಿಸಲಾಗಿದೆ.
ಜಿಲ್ಲೆಯ ವಿವಿಧ ಇಲಾಖೆ ಕಚೇರಿಗಳಲ್ಲಿ ಬರಿದಾಗಿರುವ ಹುದ್ದೆಗಳಲ್ಲಿ ನೇಮಕಾತಿ ಶೀಘ್ರದಲ್ಲೇ ನಡೆಸುವಂತೆ ಜನಪ್ರತಿನಿಧಿಗಳು ಆಗ್ರಹಿಸಿದರು. ಈ ಸಂಬಂಧ ವರದಿಯನ್ನು ಲಿಖಿತರೂಪದಲ್ಲಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ರಸ್ತೆ ಅಭಿವೃದ್ಧಿ ವೇಳೆ ವಿದ್ಯುತ್ ಕಂಬಗಳನ್ನು ಜಾಗ ಬದಲಿಸಿ ಸ್ಥಾಪಿಸುವ ಕ್ರಮ ವಿಳಂಬವಾಗುತ್ತಿದ್ದು, ಇದರ ಪರಿಹಾರಕ್ಕೆ ಶೀಘ್ರದಲ್ಲೇ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞÂ ರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಸಂಸದರ ಪ್ರತಿನಿಧಿ ಎ.ಗೋವಿಂದನ್ ನಾಯರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ , ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಷಂಸುದ್ದೀನ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶ್ವ ಅಧಿಕಾರಿ ಇ.ಪಿ.ರಾಜ್ ಮೋಹನ್, ಡಿ.ಎಫ್.ಒ. ಅನೂಪ್ ಕುಮಾರ್, ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಕಾರ್ಯಕಾರಿ ಇಂಜಿನಿಯರ್ ವಿನೋದ್ ಕುಮಾರ್, ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್, ಎಲ್.ಎಸ್.ಜಿ.ಟಿ. ಕಾರ್ಯಕಾರಿ ಇಂಜಿನಿಯರ್ ಸಂತೋಷ್ ಕುಮಾರ್ , ವಿವಿಧ ಇಲಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಯೋಜನೆ ಪ್ರಭಾರ ಅಧಿಕಾರಿ ನೆನಾಜ್ ಮೇಪ್ಪಯಿಲ್ ವರದಿ ವಾಚಿಸಿದರು.