HEALTH TIPS

ಕೋವಿಡ್ ಚಿಕಿತ್ಸೆಗೆ ಆಯುರ್ವೇದ ಔಷಧ ಭಾಗಶಃ ಪರಿಣಾಮಕಾರಿ: ಎಐಐಎ

           ನವದೆಹಲಿ: ಆರಂಭಿಕ ಹಂತ ಅಥವಾ ಗಂಭೀರವಲ್ಲದ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಚಿಕಿತ್ಸೆಗೆ ಆಯುಷ್‌ನ ಕ್ವಾಥ್ ಮತ್ತು ಫಿಫಾಟ್ರೊಲ್‌ ಮಾತ್ರೆಗಳು ಪರಿಣಾಮಕಾರಿ ಎಂದು ದೆಹಲಿ ಮೂಲದ ಅಖಿಲ ಭಾರತ ಆಯುರ್ವೇದ ವೈದ್ಯಕೀಯ ಸಂಸ್ಥೆ (ಎಐಐಎ) ವೈದ್ಯರ ತಂಡ ಭಾನುವಾರ ಹೇಳಿದೆ.

       ಆಯುರ್ವೇದದ ನಾಲ್ಕು ಚಿಕಿತ್ಸಾ ಕ್ರಮಗಳಾದ ಆಯುಷ್‌ ಕ್ವಾಥ, ಸಂಶಮನಿವತಿ, ಫಿಫಾಟ್ರೊಲ್‌ ಮಾತ್ರೆ, ಲಕ್ಷ್ಮೀವಿಲಾಸ ರಸಗಳ ಬಳಕೆಯಿಂದ ಕೋವಿಡ್ ರೋಗಿಯ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಕೇವಲ ಆರು ದಿನಗಳವೊಳಗೆ ರ್‍ಯಾ‍ಪಿಡ್ ಆಯಂಟಿಜೆನ್‌ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್‌ ಸಿಗುತ್ತದೆ ಎಂದು ಎಐಐಎ ಜರ್ನಲ್‌ನಲ್ಲಿ ಪ್ರಕಟಿತ ವರದಿ ಹೇಳಿದೆ.

       30 ವರ್ಷದ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿತ್ತು. ಸಂಶಮನ ಥೆರಪಿಯಿಂದಾಗಿ ಚೇತರಿಕೆ ಕಂಡುಬಂದಿದೆ. ಈ ಥೆರಪಿಯಡಿ ಆಯುಷ್‌ ಕ್ವಾಥ, ಸಂಶಮನಿವತಿ, ಫಿಫಾಟ್ರೊಲ್‌ ಮಾತ್ರೆ, ಲಕ್ಷ್ಮೀವಿಲಾಸ ರಸ ನೀಡಲಾಗುತ್ತದೆ ಎಂದುಹೇಳಿದೆ.

         ಈ ಥೆರೆಪಿಯಿಂದ ಕೋವಿಡ್‌ ರೋಗಲಕ್ಷಣಗಳಾದ ಜ್ವರ, ಉಸಿರಾಟ ಸಂಬಂಧಿತ ಸಮಸ್ಯೆ, ಆಯಾಸ, ಅನೋಸ್ಮಿಯಾ, ಮತ್ತು ಡಿಸ್ಜೂಸಿಯಾ ಸಮಸ್ಯೆಗಳು ಗುಣಮುಖವಾಗುತ್ತದೆ ಎಂದು ಅಧ್ಯಯನ ಹೇಳಿದೆ.

      ಎಐಎಂಐಎಲ್ ಫಾರ್ಮಾಸ್ಯುಟಿಕಲ್ ಸಂಸ್ಥೆಯು ಫಿಫಾಟ್ರೋಲ್ ಅನ್ನು ಅಭಿವೃದ್ಧಿಪಡಿಸಿದೆ. ಇದು, ರೋಗನಿರೋಧಕ ಶಕ್ತಿ ವೃದ್ಧಿಸಲಿದ್ದು, ಗುಡುಚಿ, ಸಂಜೀವಿನಿ ಘನ್ವತಿ, ದಾರುಹರಿದ್ರಾ, ಅಪಮಾರ್ಗ, ಚಿರಾಯತ, ಕರಂಜ, ಕುಟಕಿ, ತುಳಸಿ, ಗೋದಂತಿ (ಭಾಸಂ), ಮೃತ್ಯುಂಜಯ ರಾಸ, ತ್ರಿಭುವನ ಕೃತಿ ರಾಸ ಮತ್ತು ಸಂಜೀವನಿ ಅನ್ನು ಬಳಸಲಾಗಿದೆ ಎಂದು ತಿಳಿಸಿದೆ.

       ಈವರೆಗೆ ಕೋವಿಡ್‌ಗೆ ಚಿಕಿತ್ಸೆಗೆ ನಿರ್ದಿಷ್ಟ ಔಷಧ ಲಭ್ಯವಿಲ್ಲ. ವಿಶ್ವದಾದ್ಯಂತ ಸುಮಾರು 4.47 ಕೋಟಿ ಜನರು ಕೋವಿಡ್‌ನಿಂದ ಬಾಧಿತರಾಗಿದ್ದರೆ, 11.7 ಲಕ್ಷ ಜನರು ಮೃತಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries