ಕಾಸರಗೋಡು: ಆಡಳಿತೆ ಭಾಷಾ ಸಪ್ತಾಹ ಅಂಗವಾಗಿ ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಂಪರ್ಕ ಇಲಾಖೆ ಕಚೇರಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಸ್ಪರ್ಧೆಗಳು ನಡೆಯಲಿವೆ."ಮಾತೃ ಭಾಷೆ ನನ್ನ ಹಕ್ಕು" ಎಂಬ ವಿಷಯದಲ್ಲಿ ಹೈಯರ್ ಸೆಕೆಂಡರಿ , ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ ಸ್ಪರ್ಧೆ ಜರುಗಲಿದೆ. 250 ವಾಕ್ಯಗಳಿಗೆ ಮೀರದಂತೆ ರಚನೆ ಇರಬೇಕು. ನ.3ರ ಮುಂಚಿತವಾಗಿ prdcontest@gmail.com ಎಂಬ ಈ-ಮೇಲ್ ಗೆ ಪ್ರಬಂಧ ಕಳುಹಿಸಬೇಕು. ಪ್ರಬಂಧ ಸ್ಪರ್ಧೆ ಎಂದು ನಮೂದಿಸಿ, ವಿದ್ಯಾರ್ಥಿಯ ಗುರುತುಚೀಟಿಯ ದಾಖಲೆಯನ್ನೂ ಪ್ರಬಂಧದ ಜೊತೆಗೆ ಕಳುಹಿಸಬೇಕು. ವಿಜೇತರಿಗೆ ಬಹುಮಾನ ಮತ್ತು ಅರ್ಹತಾಪತ್ರ ನೀಡಲಾಗುವುದು. 9496003201.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ