ಕೊಟ್ಟಾಯಂ: ಭಾರತದ ರಾಜಕೀಯದಲ್ಲಿ ಸಿಪಿಎಂ-ಕಾಂಗ್ರೆಸ್ ಮೈತ್ರಿ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಸಿಪಿಎಂ ಸಖ್ಯ ತುರ್ತು ಆಗಬೇಕಿದೆ. ಇಂದು ಬಿಜೆಪಿಯನ್ನು ವಿರೋಧಿಸುವುದು ಮಾತ್ರ ಮುಖ್ಯವಾಗಿದೆ. ಕಾಂಗ್ರೆಸ್ ನ ಬಲ ಕ್ಷೀಣಿಸುತ್ತಿರುವುದರಿಂದ ಏಕಾಂಗಿಯಾಗಿ ಏನೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಹಾಗೆಂದು ಕಾಂಗ್ರೆಸ್ ನ್ನು ಯಾರೂ ಮೂಲೆಗುಂಪಾಗಿಸಬಹುದೆಂದು ಭಾವಿಸಬಾರದು. ಕೇರಳದ ಸಿಪಿಎಂ ಮಾತ್ರ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ವಿರೋಧಿಸುತ್ತದೆ. ಕಳೆದ ಬಿಹಾರ ಚುನಾವಣೆಯಲ್ಲೂ ಇದು ಕಂಡುಬಂತು. ಸಿಪಿಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾರಣ ಬಿಜೆಪಿ ಎಂಟು ಸ್ಥಾನಗಳನ್ನು ಕಳೆದುಕೊಂಡಿತು. ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಉಮ್ಮನ್ ಚಾಂಡಿ ಸ್ಪಷ್ಟಪಡಿಸಿದರು.
ಸೋಲಾರ್ ಪ್ರಕರಣವನ್ನು ಎಲ್‍ಡಿಎಫ್ ಸರ್ಕಾರ ತನಿಖೆಗೆ ಮುಂದಾಗಿಲ್ಲ. ಏಕೆಂದರೆ ಅದು ಅವರತ್ತ ಬೊಟ್ಟುಮಾಡುತ್ತಿದೆ ಎಂದು ಮನವರಿಕೆಯಾಗಿದೆ ಎಂದು ಉಮ್ಮನ್ ಚಾಂಡಿ ಹೇಳಿದರು. ಅತ್ಯಾಚಾರಕ್ಕೊಳಗಾದ ಮಹಿಳೆಯರು ಸಾಯುತ್ತಾರೆ ಎಂಬ ಮುಲ್ಲಪ್ಪಲ್ಲಿ ರಾಮಚಂದ್ರನ್ ಹೇಳಿಕೆಯನ್ನು ತಾವು ಗಮನಿಸಲಿಲ್ಲ ಎಂದು ಉಮ್ಮನ್ ಚಾಂಡಿ ಹೇಳಿದ್ದಾರೆ.