ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಚ್ಚಲ್ಪಟ್ಟಿರುವ ಚಿತ್ರಮಂದಿರಗಳನ್ನು ತೆರೆಯಲು ಇನ್ನೂ ಕಾಲ ಸನ್ನಿಹಿತವಾದಂತಿಲ್ಲ. ಸೋಂಕು ಹರಡುವಿಕೆ ನಿಯಂತ್ರಣದಲ್ಲಿಲ್ಲದ ಕಾರಣ ತಕ್ಷಣ ಚಿತ್ರಮಂದಿರಗಳನ್ನು ತೆರೆಯಬಾರದು ಎಂದು ಮುಖ್ಯಮಂತ್ರಿ ಇಂದು ಕರೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ವಿವಿಧ ಚಲನಚಿತ್ರ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದರು.
ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೆ, ಕೋವಿಡ್ ನಿಯಂತ್ರಣದಲ್ಲಿ ಇರದಿದ್ದರೆ ಮುಚ್ಚುವಿಕೆ ಮುಂದುವರಿಯಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಸದ್ಯಕ್ಕೆ ಚಿತ್ರಮಂದಿರಗಳನ್ನು ತೆರೆಯದಿರಲು ನಿರ್ಧರಿಸಿದೆ.
ಚಿತ್ರಮಂದಿರಗಳನ್ನು ತೆರೆಯುವುದರಿಂದ ಸೋಂಕು ಹರಡುವುದು ಹೆಚ್ಚಳವಾಗುವ ಭೀತಿಯಿದೆ ಎಂದು ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಚಿತ್ರಮಂದಿರಗಳು ತೆರೆಯುವಾಗ ಕಟ್ಟುನಿಟ್ಟಿನ ಮಾನದಂಡಗಳನ್ನು ಪಾಲಿಸಬೇಕೆಂದು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ.
ಚಲನಚಿತ್ರ ಮಂದಿರ ತೆರೆದಾಗ ಜನರನ್ನು ಅಂತರ ಕಾಯ್ದುಕೊಂಡು ಆಸನಗಳಲ್ಲಿ ಕೂರಿಸುವ ಮೂಲಕ ತೆರೆಯಬಹುದು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಹೇಳುತ್ತವೆ. ಅದರಂತೆ ತಮಿಳುನಾಡು ಸೇರಿದಂತೆ ರಾಜ್ಯಗಳಲ್ಲಿ ಪುನರಾರಂಭಿಸಲಾಗಿದೆ.