HEALTH TIPS

ರಂಗಚಿನ್ನಾರಿ ಪ್ರಶಸ್ತಿ ಪ್ರದಾನ-ಯುವ ಪೀಳಿಗೆಗೆ ರಂಗಚಿನ್ನಾರಿ ಕಾರ್ಯಕ್ರಮ ಉಪಯುಕ್ತ : ಡಾ.ಮೋಹನ್ ಎ.ಕೆ.

 

         ಕಾಸರಗೋಡು: ವಿವಿಧ ಭಾಷೆ, ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರುವ ಕಾಸರಗೋಡು ಪ್ರದೇಶ ವಿಶೇಷ ಸ್ಥಾನ ಪಡೆದಿದೆ. ಈ ಕಾರಣದಿಂದಲೇ ಈ ಮಣ್ಣಿನಲ್ಲಿ ನಿರಂತರವಾಗಿ ಸೃಜನಶೀಲ ಚಟುವಟಿಕೆಗಳು, ಆಶಯಗಳು ಗರಿಗೆದರುತ್ತಿದೆ. ಇಂತಹ ಅಪೂರ್ವ ಸನ್ನಿವೇಷದಲ್ಲಿ ರಂಗಚಿನ್ನಾರಿ ಸಂಸ್ಥೆಯ ಚಟುವಟಿಕೆಗಳು ಯುವ ಪೀಳಿಗೆಗೆ ಉಪಯುಕ್ತ ಹಾಗು ಮಾದರಿಯಾಗಿದೆ ಎಂದು ಕೇರಳ ಕೇಂದ್ರ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮೋಹನ್ ಎ.ಕೆ. ಅವರು ಹೇಳಿದರು. 

         ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಕಾಸರಗೋಡಿನ ಸಾಂಸ್ಕøತಿಕ ಲೋಕದ ಹೆಮ್ಮೆಯ ಸಂಸ್ಥೆಯಾದ ರಂಗಚಿನ್ನಾರಿಯ 14ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

         ಕಾರ್ಯಕ್ರಮದಲ್ಲಿ ಕಳೆದ 37 ವರ್ಷಗಳಿಂದ ತಮ್ಮ ನಾಟ್ಯ ನಿಲಯಂ ಸಂಸ್ಥೆಯ ಮೂಲಕ ನೂರಾರು ಮಂದಿಗೆ ಭರತನಾಟ್ಯ ತರಬೇತಿ ನೀಡುತ್ತಿರುವ ಗುರು ಬಾಲಕೃಷ್ಣ  ಮಂಜೇಶ್ವರ ಹಾಗೂ ಹೆಸರಾಂತ ಸಾಹಿತಿ ವಿಜಯಲಕ್ಷ್ಮೀ ಶ್ಯಾನುಭೋಗ್ ಅವರಿಗೆ ರಂಗಚಿನ್ನಾರಿ ಪ್ರಶಸ್ತಿ ಹಾಗು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಸರೀಕರಿಗೆ ಮಾದರಿಯಾಗಿರುವ ಅನೂಪ್ ಸ್ವರ್ಗ, ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ಅಪೇಕ್ಷಾ ಪೈ ಮತ್ತು ಯೋಗ ಮತ್ತು ನೃತ್ಯದಲ್ಲಿ  ರಾಷ್ಟ್ರಮಟ್ಟದಲ್ಲಿ ಹೆಸರಾಗುತ್ತಿರುವ ಬಾಲೆ ಕುಮಾರಿ ಅಭಿಜ್ಞಾ ಹರೀಶ್ ಅವರಿಗೆ ರಂಗಚಿನ್ನಾರಿ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕøತರಿಗೆ ಸಮ್ಮಾನಪತ್ರ, ಫಲಕ, ಫಲ, ಶಾಲು, ಹಾರಗಳ ಜೊತೆ ನಗದು ನೀಡಿ ಗೌರವಿಸಲಾಯಿತು.  

          ಧಾರ್ಮಿಕ ಮುಂದಾಳು ಮತ್ತು ಖ್ಯಾತ ಜ್ಯೋತಿಷಿ ಸಿ.ವಿ.ಪೆÇದುವಾಳ್ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಸರಗೋಡಿನಲ್ಲಿರುವಷ್ಟು ಕಲಾ ಪ್ರಕಾರಗಳು ರಾಜ್ಯದ ಇನ್ನೆಲ್ಲು ಸಿಗದು ಎಂದರು. ಕಲೆ, ಸಾಹಿತ್ಯ ಮೊದಲಾದ ಪ್ರಕಾರಗಳ ತವರೂರು ಎಂದು ಅವರು ಅಭಿಪ್ರಾಯಪಟ್ಟರು. 

        ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ನುಡಿದ ರಂಗಚಿನ್ನಾರಿ ಕಳೆದ 14 ವರ್ಷಗಳ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ನಿರ್ದೇಶಕ ಕೆ.ಸತ್ಯನಾರಾಯಣ ವಂದಿಸಿದರು. ಅಪೇಕ್ಷಾ ಪೈ ಅವರಿಂದ ಗಾಯನ ಹಾಗೂ ಅಭಿಜ್ಞಾ ಹರೀಶ್ ಅವರಿಂದ ಯೋಗ ಪ್ರದರ್ಶನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries