ಕಾಸರಗೋಡು: ವಾರ್ಡ್‍ಗಳನ್ನು ಬದಲಾಯಿಸುವ ಮೂಲಕ ಜನರ ತೀರ್ಪು ಪಡೆಯಲು ಗಡಿ ಗ್ರಾಮದ ದಂಪತಿಗಳು ಎರಡನೇ ಬಾರಿಗೆ ತಯಾರಾಗುತ್ತಿದ್ದಾರೆ. ಎಣ್ಮಕಜೆ ಗ್ರಾ.ಪಂ.ನ ಒಂದು ಮತ್ತು ಎರಡನೇ ವಾರ್ಡ್ ಗಳಲ್ಲಿ ಈ ಹಿಂದೆ ಸದಸ್ಯರಾಗಿ ಆಯ್ಕೆಯಾಗಿದ್ದ ಐತ್ತಪ್ಪ ಕುಲಾಲ್ ಮತ್ತು ಅವರ ಪತ್ನಿ ಜಯಶ್ರೀ ಎಸ್ ಅವರು ಈ ಬಾರಿಯೂ ಉಮೇದ್ವಾರಿಕೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ. ಯುಡಿಎಫ್ ಅಭ್ಯರ್ಥಿಗಳಾಗಿ ಇಬ್ಬರೂ ಸ್ಪರ್ಧಿಸುತ್ತಿದ್ದಾರೆ. ಐತ್ತಪ್ಪ ಕುಲಾಲ್ ಐದನೇ ವಾರ್ಡ್ ನಿಂದ ಸ್ಪರ್ಧಿಸುವುದಾದರೆ ಅವರ ಪತ್ನಿ ಜಯಶ್ರೀ ಕುಲಾಲ್ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಐವಪ್ಪ ಕುಲಾಲ್ ಚವರ್ಕಾಡು ವಾರ್ಡ್ ಮತ್ತು ಜಯಶ್ರೀ ಸಾಯ ವಾರ್ಡ್‍ನಿಂದ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಚವರ್ಕಾಡು ವಾರ್ಡ್ ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಇದರಿಂದ ಐತ್ತಪ್ಪ ಕುಲಾಲ್ ಎರಡನೇ ವಾರ್ಡ್‍ನಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಜಯಶ್ರೀ ಅವರು ಇದೀಗ ಚವರ್ಕಾಡ್ ವಾರ್ಡಿನಿಂದ ಸ್ಪರ್ಧಿಸಲಿದ್ದಾರೆ. ವಾರ್ಡ್‍ಗಳ ಸಮಗ್ರ ಅಭಿವೃದ್ಧಿಗೆ ಈ ಅವಧಿಯಲ್ಲಿ ಗರಿಷ್ಠ ಕೆಲಸ ಮಾಡಲಾಗಿದೆ ಎಂದು ಇಬ್ಬರೂ ಹೇಳಿರುವರು.
ಸ್ಪರ್ಧಿಸದಿರುವ ನಿರ್ಧಾರವನ್ನು ದಂಪತಿಗಳು ಒಪ್ಪಲಿಲ್ಲ:
ಪತಿ ಮತ್ತು ಪತ್ನಿ ಒಟ್ಟಿಗೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಕಾಂಗ್ರೆಸ್ಸ್ ಪಕ್ಷದ ನಿಬಂಧನೆಯಿದೆ. ಆದಾಗ್ಯೂ, ಎಣ್ಮಕಜೆಯ ಸ್ಥಳೀಯ ನಾಯಕತ್ವವು ಇತರ ಕಾರಣಗಳಿಂದ ಪಕ್ಷದ ನಾಯಕತ್ವದ ನಿರ್ಧಾರಕ್ಕಿಂತ ಭಿನ್ನವಾಗಿ ದಂಪತಿಗಳಿಗೆ ಟಿಕೆಟ್ ನೀಡಲು ನಿರ್ಧಋಇಸಿದೆ. ಅವರ ಕುಟುಂಬ, ಸಂಬಂಧಿಕರು ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗಗೈಯ್ಯುವ ಇವರ ಪುತ್ರಿ ಸಾನ್ನಿಧ್ಯಾಳ ಒತ್ತಾಯದ ಮೇರೆಗೆ ಇಬ್ಬರನ್ನೂ ಕಣಕ್ಕಿಳಿಸಲು ಪಕ್ಷ ಚಿಂತಿಸಿತೆಂದು ತಿಳಿದುಬಂದಿದೆ. ಅವರ 20 ವರ್ಷಗಳ ಸಾರ್ವಜನಿಕ ಸೇವೆಯ ಅವಧಿಯಲ್ಲಿ, ಅವರು 10 ವರ್ಷಗಳ ಕಾಲ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಯಶ್ರೀ ಕಳೆದ ಐದು ವರ್ಷಗಳಿಂದ ಸದಸ್ಯೆಯಾಗಿದ್ದಾರೆ. ಅವಿಶ್ವಾಸ ನಿರ್ಣಯದ ಕಾರಣ ಪಂಚಾಯತ್ ಅಧ್ಯಕ್ಷರು ರಾಜೀನಾಮೆ ನೀಡಿದ ಸಂದರ್ಭ ಜಯಶ್ರೀ ಮೂರು ತಿಂಗಳುಗಳ ಕಾಲ ಪಂಚಾಯತ್ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು.
ಲಾಕ್ ಡೌನ್‍ನಲ್ಲಿ ಜನಮನ್ನಣೆ ಪಡೆದ ದಂಪತಿಗಳ ಸೇವೆ:
ಕೋವಿಡ್ ನಿಯಂತ್ರಣದ ಲಾಕ್ ಡೌನ್ ಘೋಷಿಸಿದಾಗ,ಗಡಿ ಗ್ರಾಮವಾದ ಈ ವಾರ್ಡ್‍ಗಳಲ್ಲಿನ ಜನರು ಹೊರ ಪ್ರಪಂಚದ ಸಂಪರ್ಕಕ್ಕೆ ಭಾರೀ ಸಂಕಷ್ಟ ಅನುಭವಿಸಿದ್ದರು. ಕರ್ನಾಟಕ ಅಧಿಕಾರಿಗಳು ಸಾರಡ್ಕ ಚೆಕ್ ಪೆÇೀಸ್ಟ್ ನ್ನು ಮುಚ್ಚಿದ ತರುವಾಯ ಪೆರ್ಲ ಪಟ್ಟಣವನ್ನು ತಲುಪುವುದು ತುಂಬಾ ಕಷ್ಟಕರವಾದ ಕಾರಣ ಆ ಸಂದರ್ಭ ದಂಪತಿಗಳ ಸೇವೆ ಗುರುತಿಸಲ್ಪಟ್ಟಿತು. ಮಂಜೇಶ್ವರ ಶಾಸಕ ಮತ್ತು ಸಂಸದರ ಸಹಾಯದಿಂದ ಜನರಿಗೆ ಆಹಾರ ಸಾಮಗ್ರಿಗಳನ್ನು ಖರೀದಿಸಲು ವಾರ್ಡ್‍ನಲ್ಲಿ ಪಡಿತರ ಅಂಗಡಿಯೊಂದನ್ನು ಸ್ಥಾಪಿಸಲಾಯಿತು. ಕನ್ನಡ, ಮಲಯಾಳ, ತುಳು, ಕೊಂಕಣಿ, ಮರಾಠಿ ಮತ್ತು ಬ್ಯಾರಿ ಭಾಷೆಗಳನ್ನು ಬಳಸುವ ಜನರು ಈ ವಾರ್ಡ್ ನಲ್ಲಿದ್ದಾರೆ. ದಂಪತಿಗಳು ಮತದಾರರಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂಬ ವಿಶ್ವಾಸದಿಂದ ಮತ್ತೆ ಮತದ ಬೇಟೆಗೆ ಓಡುತ್ತಿದ್ದಾರೆ.
ಶಾನವಾಸ್ ಪಾದೂರು ರಾಜೀನಾಮೆ!:
ಏತನ್ಮಧ್ಯೆ, ಕಾಂಗ್ರೆಸ್ ಯುವ ಮುಖಂಡ ಶಹನಾವಾಜ್ ಪಾದೂರು ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವರು. ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಾನವಾಸ್ ಈ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿಯ ಹಾಲಿ ಅಧ್ಯಕ್ಷರಾದ ಶಾನವಾಸ್ ಅವರು ಕಾಂಗ್ರೆಸ್ ರಾಜೀನಾಮೆ ಘೋಷಿಸಿದರು. ಎಲ್‍ಡಿಎಫ್ ಬೆಂಬಲದೊಂದಿಗೆ ಚೆಂಗಳ ಜಿಲ್ಲಾ ಪಂಚಾಯತ್ ವಿಭಾಗದಿಂದ ಸ್ಪರ್ಧಿಸುವುದಾಗಿ ಹೇಳಿರುವರು. ನಾಮನಿರ್ದೇಶನಕ್ಕೆ ಮುನ್ನ ಕೇವಲ ಒಂದು ದಿನ ಇರುವಾಗ ಶಾನವಾಸ್ ಎಲ್‍ಡಿಎಫ್ ಪರ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದು ಯುಡಿಎಫ್ ನೊಳಗೆ ಗೊಂದಲಕ್ಕೂ ಕಾರಣವಾಯಿತೆಂದು ತಿಳಿದುಬಂದಿದೆ. ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ವಿರೋಧಿ ವರ್ತನೆ, ಅರ್ಹತೆ ಇರುವವರನ್ನು ನಿರ್ಲಕ್ಷಿಸಿರುವುದನ್ನು ವಿರೋಧಿಸಿ ತಾವು ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಾನವಾಸ್ ಹೇಳಿದ್ದರು.
(ಚುನಾವಣೆ ಹಿನ್ನೆಲೆಯಲ್ಲಿ ನೀವೂ ಇಂತಹ ವಿಶೇಷಗಳನ್ನು ಗಮನಿಸಿದರೆ ನಮಗೆ ತಿಳಿಸಿ)