ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಬಾವಣೆ ಚಟುವಟಿಕೆಗಳನ್ನು ದಕ್ಷತೆಯಿಂದ ಏಕೀಕರಣ ಗೊಳಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣೆ ಆಯೋಗ ಏರ್ಪಡಿಸಿರುವ ಮೊಬೈಲ್ ಆಪ್ ಪೋಲ್ ಮೇನೇಜರ್.
ಮತದಾನ ಸಂಬಂಧ ಪ್ರಧಾನ ಮಾಹಿತಿಗಳನ್ನು ತ್ವರಿತಗತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಒದಗಿಸಲು ಈ ಆಪ್ ಬಳಸಲಾಗುವುದು. ಮತದಾನ ದಿನವೂ ಅದರ ಹಿಂದಿನ ದಿನವೂ ಪೋಲ್ ಮೆನೆಜರ್ ಆಪ್ ಬಳಕೆಯಲ್ಲಿರುವುದು. ಮತಯಂತ್ರ ವಹಿಸಿಕೊಳ್ಳುವ ದಿನದಿಂದ ಮತದಾನ ಮುಗಿದು ಮತಯಂತ್ರ ಮರಳಿಸುವ ವರೆಗಿನ ಎಲ್ಲ ಮಾಹಿತಿಗಳನ್ನೂ ಈ ಆಪ್ ನಲ್ಲಿ ನಮೂದಿಸಲಾಗುವುದು. ಮತದಾನ ದಿನ ಸೂಕ್ತ ಮಧ್ಯಂತರಗಳಲ್ಲಿ ಎಲ್ಲ ಮತಗಟ್ಟೆಗಳಿಂದ ಶೇಕಡಾ ಮತದಾನವನ್ನು ಸಿಬ್ಬಂದಿ ಈ ಆಪ್ ಮೂಲಕ ನೀಡಬಹುದಾಗಿದೆ.
ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಈ ಆಪ್ ರಚಿಸಿದೆ. ಮುಂಗಡ ನಿಗದಿ ಪಡಿಸಿರುವ 21 ಪ್ರಶ್ನಾವಳಿಗಳು ಈ ಆಪ್ ನಲ್ಲಿವೆ. ಈ ಮೂಲಕ ಮತಗಟ್ಟೆಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿ ಹೊರಟು ಮರಳುವವರೆಗಿನ ಮಾಹಿತಿ ಆಪ್ ನಲ್ಲಿ ನಮೂದಿಸಲಾಗುವುದು. ಪ್ರಸೈಡಿಂಗ್ ಆಪೀಸರ್, ಫಸ್ಟ್ ಪೋಲಿಂಗ್ ಆಪೀಸರ್, ಸೆಕ್ಟರಲ್ ಆಪೀಸರ್ ಎಂಬವರು ಈ ಆಪ್ ಬಳಸುವ ಹೊಣೆಹೊಂದಿದ್ದಾರೆ. ಸಿಬ್ಬಂದಿಯ ಮೊಬೈಲ್ಫೆಪೋನ್ ಗೆ ಬರುವ ಒ.ಟಿ.ಪಿ. ನಂಬ್ರ ಬಳಸಿ ಈ ಆಪ್ ಓಪನ್ ಮಾಡಬಹುದು. ಮತಗಟ್ಟೆಗಳಿಗೆ ಹೊರಡುವ ಮುನ್ನ ಸಿಬ್ಬಂದಿಗೆ ನಂಬ್ರ ಅಪ್ ಲೋಡ್ ನಡೆಸುವ ಸೌಲಭ್ಯ ಚನಾವಣೆ ಸಾಮಾಗ್ರಿ ವಿತರಣೆ ಕೇಂದ್ರಗಳಿಂದ ಲಭಿಸಲಿದೆ. ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಗೆ ಪೆÇೀಲ್ ಮೆನೆಜರ್ ಆಪ್ ಬಳಸುವ ಸಿಬ್ಬಂದಿಯ ಮಾಹಿತಿ ಸಂಗ್ರಹಿಸುವ ಹೊಣೆಯಿರುವುದು.
ಪೆÇೀಲ್ ಮೇನೇಜರ್ ಮೊಬೈಲ್ ಆಪ್ ನೊಂದಿಗೆ ಸಂಬಂಧಪಟ್ಟ ಸಿಬ್ಬಂದಿಗಿರುವ ತರಬೇತಿ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಮಾಸ್ಟರ್ ಟ್ರೈನಿಗಳಿಗೆ ಎನ್.ಐ.ಸಿ.ಯ ಜಿಲ್ಲಾ ಇನ್ ಫಾರ್ಮೆಟಿಕ್ಸ್ ಆಪೀಸರ್ ಗಳು ತರಬೇತು ನಿಡುವರು. ತರಬೇತಿ ಲಭಿಸಿದ ಮಾಸ್ಟರ್ ಟ್ರೈನಿಗಳು ಬ್ಲೋಕ್ ಮಟ್ಟದ/ನಗರಸಭೆ ಮಟ್ಟದ ಟ್ರೈನರ್ ಮೊದಲಾದವರಿಗೆ ನ.23ರಂದು ತರಬೇತು ನೀಡುವರು. ಪ್ರಿಸೈಡಿಂಗ್ ಆಫೀಸರ್, ಫಸ್ಟ್ ಪೋಲಿಂಗ್ ಆಫೀಸರ್ ಮೊದಲಾದವರಿಗೆ ಬ್ಲೋಕ್ ಮಟ್ಟದ ಟ್ರೈನರ್ ಗಳಿಗೆ ತರಬೇತು ನೀಡಲಾಗುವುದು.