ತಿರುವನಂತಪುರ: ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಬಂಧನದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲಿಲ್ ಪೇಸ್ ಬುಕ್ ಪೋಸ್ಟ್ ಮೂಲಕ ಅಪಹಾಸ್ಯಗೈದಿದ್ದು ಸೃಷ್ಟಿಕರ್ತ ಶ್ರೇಷ್ಠ. ಚಕ್ಕಿನ್ ವೆಚ್ಚದ್ ಕೊಕ್ಕಿನ್ ಕೊಂಡು ಎಂಬ ಪೋಸ್ಟ್ ಹಂಚಿದ್ದಾರೆ.
ಚಿನ್ನ ಕಳ್ಳಸಾಗಣೆ, ಧಾರ್ಮಿಕ ಗ್ರಂಥಗಳ ವಿತರಣೆಗೆ ಸಂಬಂಧಿಸಿದಂತೆ ಲೀಗ್ ನಾಯಕರು ಜಲೀಲ್ ವಿರುದ್ದ ಭಾರೀ ಪ್ರತಿಭಟನೆ ನಡೆಸುತ್ತಿರುವ ಬೆನ್ನಿಗೇ ಕಮರುದ್ದೀನ್ ಬಂಧನವಾಗಿರುವುದರಿಂದ ಎಲ್ ಡಿ ಎಫ್ ಗೆ ಇದೀಗ ಪ್ರತಿಕಾರಕ್ಕೆ ಕಾಲ ಕೂಡಿಬಂದಂತಿದೆ.
ಫ್ಯಾಶನ್ ಗೋಲ್ಡ್ ಹೂಡಿಕೆ ವಂಚನೆ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಮತ್ತು ಮುಸ್ಲಿಂ ಲೀಗ್ ಮುಖಂಡ ಎಂ.ಸಿ. ಕಮರುದ್ದೀನ್ ಬಂಧನ ನಿನ್ನೆ ನಡೆದಿತ್ತು. ಚಂದೇರಾ ಪೆÇಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಕಮರುದ್ದೀನ್ ವಿರುದ್ಧ ಬಲವಾದ ಪುರಾವೆಗಳಿವೆ ಎಂದು ಎಎಸ್ಪಿ ಹೇಳಿರುವರು.