ಕುಂಬಳೆ: ಶುದ್ಧ ಪಾಡ್ಯದ ಬೆಳಕಿನ ಹಬ್ಬದ ಆಚರಣೆಯಿಂದ ಆರಂಭಗೊಳ್ಳುವ ಕಾರ್ತಿಕಮಾಸವನ್ನು ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವದೊಂದಿಗೆ ಸರಳವಾಗಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಆಚರಿಸಲಾಗುವುದು. ಪ್ರತಿ ದಿನ ಸಂಜೆ ಏಳು ಗಂಟೆಗೆ ಭಜನೆ 8 ಗಂಟೆಗೆ ಅಲಂಕಾರ ಪೂಜೆ ನಡೆಯಲಿದೆ. ನವೆಂಬರ 15 ರಿಂದ ಆರಂಭಗೊಂಡು ದಶಂಬರ 14ರ ತನಕ ಕಾರ್ತಿಕಮಾಸ ದೀಪೋತ್ಸವ ಜರಗಲಿದೆ. ಕೃತ್ತಿಕಾ ನಕ್ಷತ್ರವಾದ ನವಂಬರ್ 29ರಂದು ಶ್ರೀ ಕ್ಷೇತ್ರ ಶೇಷವನದಲ್ಲಿ ಮಹಾದೀಪೋತ್ಸವ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಪಾಲ್ಗೊಳ್ಳಬೇಕೆಂದು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಕೇಳಿಕೊಂಡಿದ್ದಾರೆ.