HEALTH TIPS

ಜೂಮ್‌ಗೆ ಪೈಪೋಟಿ ನೀಡಿದ ಮೈಕ್ರೊಸಾಫ್ಟ್‌ ಟೀಮ್ಸ್‌: ಉಚಿತ ವಿಡಿಯೋ ಕರೆ ಸೌಲಭ್ಯ

         ಮೈಕ್ರೋಸಾಫ್ಟ್‌ ಆಲ್‌ ಡೇ ವಿಡಿಯೋ ಕಾಲಿಂಗ್‌ ಆಯ್ಕೆಯನ್ನು ನೀಡುತ್ತಿದ್ದು ಅದರಿಂದ ಮೈಕ್ರೋಸಾಫ್ಟ್‌ ಟೀಮ್ಸ್‌ ಬಳಕೆದಾರರು 24 ಗಂಟೆಗಳ ಉಚಿತ ವಿಡಿಯೋ ಕಾಲ್‌ ಸೌಲಭ್ಯ ಪಡೆಯಬಹುದಾಗಿದ್ದು ಜತೆಗೆ ಒಂದು ಮೀಟಿಂಗ್‌ನಲ್ಲಿ 300 ಜನ ಪಾಲ್ಗೊಳ್ಳಬಹುದಾಗಿದೆ.

      ಆಲ್‌ ಡೇ ವಿಡಿಯೋ ಕಾಲಿಂಗ್‌ ವೈಶಿಷ್ಟ್ಯದ ಜತೆಗೆ 250 ಸದಸ್ಯರನ್ನು ಗ್ರೂಪ್‌ ಚಾಟ್‌ನಲ್ಲಿ ಸೇರಿಸಲು ಮತ್ತು ವರ್ಚುವಲ್‌ ಚಾಟ್‌ನಲ್ಲಿ 49 ಸದಸ್ಯರು ಕಾಣುವಂತೆ ಮಾಡುವ ಆಯ್ಕೆ ಇರಲಿದೆ ಎಂದು ಮೈಕ್ರೋಸಾಫ್ಟ್‌ ಬ್ಲಾಗ್‌ನಲ್ಲಿ ತಿಳಿಸಲಾಗಿದೆ.

       ಬಳಕೆದಾರರು ತಮ್ಮ ವೈಯಕ್ತಿಯ ಖಾತೆಯ ವಿವರಗಳನ್ನು ಟೀಮ್ಸ್‌ನ ಡೆಸ್ಕ್‌ಟಾಪ್‌ ಅಥವಾ ವೆಬ್‌ ಆ್ಯಪ್ನಲ್ಲಿ ಸೇರಿಸಿದರೆ ತಮ್ಮ ಚ್ಯಾಟ್‌ ಅನ್ನು ಕಂಪ್ಯೂಟರ್‌ನೊಂದಿಗೆ ಸಿಂಕ್‌ ಮಾಡಬಹುದು. ಮೀಟಿಂಗ್‌ ಆರಂಭಿಸುವವರ ಹೊರತಾಗಿ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಬಯಸುವವರು ಮೈಕ್ರೋಸಾಫ್ಟ್‌ ಖಾತೆ ಹೊಂದಿರದಿದ್ದರು ಮೀಟಿಂಗ್‌ ಲಿಂಕ್‌ನ ಮೂಲಕ ವೆಬ್‌ ಬ್ರೌಸರ್‌ನಲ್ಲಿ ಮೀಟಿಂಗ್‌ಗೆ ಸೇರಬಹುದು.

ಸೌತೆಕಾಯಿ ಸಿಪ್ಪೆಯ ಮೂಲಕ ಆಹಾರ ಪ್ಯಾಕ್‌ ಮಾಡುವ ಪದಾರ್ಥ ಕಂಡುಹಿಡಿದ ಐಐಟಿ ಖರಗ್‌ಪುರದ ಸಂಶೋಧಕರು

        ಈ ವರ್ಷದ ಜುಲೈನಲ್ಲಿ ಉಚಿತವಾಗಿ ಮೈಕ್ರೋಸಾಫ್ಟ್‌ ಟೀಮ್ಸ್‌ ಬಳಸಬಹುದು ಎಂದು ಘೋಷಿಸಿಕೊಂಡಾಗಿನಿಂದಲು ಅದರ ಬಳಕೆ ಹೆಚ್ಚಾಗಿದೆ. ಇತ್ತೀಚೆಗೆ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನದೆಲ್ಲಾ ಟೀಮ್ಸ್‌ಗೆ ವಿಶ್ವದ ತುಂಬಾ 115 ಮಿಲಿಯನ್‌ ಸಕ್ರಿಯ ಬಳಕೆದಾರರಿದ್ದಾರೆಂದು ಹೇಳಿದ್ದರು.

ಕೋವಿಡ್‌-19 ಬಿಕ್ಕಟ್ಟು ಮುಂದುವರೆಯುತ್ತಿರುವ ಕಾರಣ ವಿಡಿಯೋ ಕಾನ್ಫೆರೆನ್ಸ್‌ ತುಂಬಾ ಪ್ರಮುಖವಾಗಿ ಮಾರ್ಪಟ್ಟಿರುವುದರಿಂದ ಇನ್ನೂ ಹಲವು ವೈಶಿಷ್ಟ್ಯಗಳನ್ನು ಮುಂಬರುವ ತಿಂಗಳಲ್ಲಿ ಕಂಪನಿ ಟೀಮ್ಸ್‌ಗೆ ಸೇರಿಸಲಿದೆ.


      ಹೆಚ್ಚಿನ ಜನರು ಸಾಂಕ್ರಾಮಿಕದ ಕಾರಣದಿಂದ ಮನೆಯಿಂದ ಅಥವಾ ದೂರದ ಪ್ರದೇಶದಿಂದ ಕೆಲಸ ಮಾಡುತ್ತಿರುವುದು ವಿಡಿಯೋ ಕಾಲಿಂಗ್‌ ಆ್ಯಪ್ಗಳಿಗೆ ಬೇಡಿಕೆ ಬರುವಂತೆ ಮಾಡಿದೆ.

10 ಮಿಲಿಯನ್‌ ದೈನಿಕ ಸಕ್ರಿಯ ಬಳಕೆದಾರರಿಂದ 300 ಮಿಲಿಯನ್‌ ದೈನಿಕ ಸಕ್ರಿಯ ಬಳಕೆದಾರನ್ನು ಗಳಿಸಿದ ಜೂಮ್‌ ಈ ಮಾರುಕಟ್ಟೆಯ ಸಾಮರ್ಥ್ಯವನ್ನು ತೋರಿಸುತ್ತದೆ.

      ಜೂಮ್‌ ಆ್ಯಪ್ನ ವಿಡಿಯೋ ಕಾಲ್‌ಗೆ 40 ನಿಮಿಷಗಳ ನಿರ್ಬಂಧವಿತ್ತು, ಅದನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇಂತಹ ಇತರ ಆ್ಯಪ್ಗಳಾದ ಗೂಗಲ್‌ ಮೀಟ್‌, ಸಿಸ್ಕೋ ವೆಬೆಕ್ಸ್‌ ಸೀಮಿತ ಅವಧಿಯ ಉಚಿತ ವಿಡಿಯೋ ಕರೆ ಸೌಲಭ್ಯಗಳನ್ನು ನೀಡುತ್ತದೆ.

      ಜಿಯೋಮೀಟ್‌, ವಿಡಿಯೋಮೀಟ್‌, ಸೇ ನಮಸ್ತೆ ಮತ್ತು ಇತರೆ ಕೆಲವು ಆ್ಯಪ್ಗಳನ್ನು ಭಾರತದಲ್ಲೆ ನಿರ್ಮಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries