ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಹೇಳಿಕೆ ಗಂಭೀರ ಲೋಪವಾಗಿದೆ ಎಂದು ಸಚಿವ ಎ.ಕೆ.ಬಾಲನ್ ಹೇಳಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸಚಿವರು ತನಿಖಾ ಸಂಸ್ಥೆಗಳನ್ನು ಕೇಳಿದರು. ಇಂತಹ ಹೇಳಿಕೆಗಳು ಸುಪ್ರೀಂ ಕೋರ್ಟ್‍ನ ತೀರ್ಪಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದರು.
"ಕೇರಳದ ಎಡಪಂಥೀಯರು ಅಥವಾ ಕಮ್ಯುನಿಸ್ಟರು ಬಿಜೆಪಿ ಮತ್ತು ಕಾಂಗ್ರೆಸ್ ನ ಬೆದರಿಕೆಗೆ ಬಗ್ಗುವವರಲ್ಲ". ಎಲ್ಲಾ ಸುಳ್ಳು ಅಪಪ್ರಚಾರಗಳನ್ನು ಜನರ ಮುಂದೆ ಎಡಪಂಥೀಯರು ಬಲವಾಗಿ ಬಹಿರಂಗಪಡಿಸುತ್ತಾರೆ ಎಂದು ಸಚಿವ ಬಾಲನ್ ಹೇಳಿದರು.
ತನಿಖಾ ಸಂಸ್ಥೆಗಳ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಭಾವದ ಸಾಕ್ಷಿಯಾಗಿ ಈಗಿನ ಮಾಧ್ಯಮ ವರದಿಗಳು ಬಿತ್ತರಗೊಳ್ಳುತ್ತಿವೆ ಎಂದು ಅವರು ನಿನ್ನೆ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿರುವರು.