ಮುಳ್ಳೇರಿಯ: ಸಂತೋಷ್ ಟ್ರಾಫಿ ಫುಟ್ ಬಾಲ್ ತಾರೆ ಕೆ.ಪಿ.ರಾಹುಲ್ ಅವರ ಬದುಕಿನ ಕನಸು ನನಸಾಗಿದೆ. ಸರ್ಕಾರಿ ಉದ್ಯೋಗದ ಜೊತೆಗೆ ಕ್ರೀಡಾ ಇಲಾಖೆ ನಿರ್ಮಿಸಿರುವ ಮನೆಯ ಕೀಲಿಕೈ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕ್ರೀಡಾ ಸಚಿವ ಇ.ಪಿ.ಜಯರಾಜನ್ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಆರೋಗ್ಯವಂತ ಜನತೆಯನ್ನು ಸಿದ್ಧಪಡಿಸುವ ಮೂಲಕ ಕ್ರೀಡಾ ವಲಯದ ಸಮಗ್ರ ಅಭಿವೃದ್ಧಿ ಕ್ರೀಡಾ ಇಲಾಖೆಯ ಉದ್ದೇಶ ಎಂದು ನುಡಿದರು. ಎಲ್ಲರಿಗೂ ಆರೋಗ್ಯ ಒದಗಿಸುವ ರಾಜ್ಯ ಸರ್ಕಾರದ ಗುರಿಯ ಉದ್ದೇಶಕ್ಕೆ ಇದು ಪೂರಕವಾಗಿದೆ ಎಂದವರು ತಿಳಿಸಿದರು.
ಪಿಲಿಕೋಡ್ ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಪಿಲಿಕೋಡ್ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ವಿ.ಶ್ರೀಧರನ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್, ಸದಸ್ಯ ಕೆ.ಪಿ.ರಾಹುಲ್, ಮಾಜಿ ಶಾಸಕ ಕೆ.ಕುಂಞÂರಾಮನ್, ಟಿ.ವಿ.ಗೋವಿಂದನ್ ಮೊದಲಾದವರು ಉಪಸ್ಥಿತರಿದ್ದರು.