ಮಂಜೇಶ್ವರ: ಪಾವಳದ ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರರಿಯ ವತಿಯಿಂದ ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಬಂಜರು ಭೂಮಿಯಲ್ಲಿ ಕೃಷಿ ಮಾಡಿ ಬೆಳೆಸಿದ ಭತ್ತದ ಬೆಳೆಯ ಕೊಯ್ಲು ಉತ್ಸವ ಇತ್ತೀಚೆಗೆ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ. ಡಿ ಕೊಯ್ಲು ಉತ್ಸವ ಉದ್ಘಾಟಿಸಿದರು. ಲೈಬ್ರರಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾವಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಜಯ ಕುಮಾರ್ ಪಾವಳ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಲಿಖಿತ್ ವಂದಿಸಿಸದರು. ಲೈಬ್ರರಿಯ ಸದಸ್ಯರು ಕೊಯ್ಲು ಉತ್ಸವದಲ್ಲಿ ಭಾಗವಹಿಸಿದ್ದರು.
ಲೈಬ್ರರಿ ಸದಸ್ಯರು 80 ಸೆಂಟ್ಸ್ ಬಂಜರು ಭೂಮಿಯಲ್ಲಿ ಪ್ರಸ್ತುತ ಕಜೆ ಜಯ ತಳಿಯ ಭತ್ತ ಬೆಳೆಸಿದ್ದು ನಿರೀಕ್ಷೆಗೂ ಮೀರಿದ ಫಸಲು ತರಿಸಿರುವುದು ಕೃತಾರ್ಥತೆಗೆ ಕಾರಣವಾಗಿದೆ. ಲೈಬ್ರರಿ ನೇತೃತ್ವದಲ್ಲಿ ಕಳೆದ ವರ್ಷ ಬಂಜರು ಭೂಮಿಯಲ್ಲಿ ತರಕಾರಿ ಕೃಷಿಯನ್ನೂ ನಡೆಸಿ ಉತ್ತಮ ಫಸಲು ಪಡೆಯಲಾಗಿತ್ತು ಎಂದು ಕಾರ್ಯದರ್ಶಿ ವಿಯಕುಮಾರ್ ಪಾವಳ ತಿಳಿಸಿದ್ದಾರೆ.