ಮಧೂರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ತಮ್ಮ ಪೀಠಾರೋಹಣದ ನಂತರ ಪ್ರಥಮವಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬುಧವಾರ ಸಂಜೆ ಚಿತ್ತೈಸಿದರು. ಈ ಸಂದರ್ಭದಲ್ಲಿ ಪವಿತ್ರಪಾಣಿ ರತನ್ ಕುಮಾರ್ ಕಾಮಡ ದಂಪತಿಗಳು ಪಾದ ಪೂಜೆ ನೆರವೇರಿಸಿದರು.
ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ,ದೇರೇಬೈಲು ಶಿವಪ್ರಸಾದ ತಂತ್ರಿ, ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು, ಮಧೂರು ಶ್ರೀಕ್ಷೇತ್ರದ ನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ, ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ,ಡಾ.ಬಿ.ಎಸ್.ರಾವ್, ವಿಷ್ಣುಭಟ್, ಮಂಜುನಾಥ ಕಾಮತ್, ಮುರಳಿ ಗಟ್ಟಿ, ರಾಜೇಂದ್ರ ಕಲ್ಲೂರಾಯ ಎಡನೀರು, ಸೂರ್ಯನಾರಾಯಣ ಎಡನೀರು, ಸತೀಶ್ ರಾವ್, ಗೋಕುಲ ಭಟ್ ಮೊದಲಾದವರು ಉಪಸ್ಥಿತರಿದ್ದರು.