ಕಾಸರಗೋಡು: ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹಾಗೂ ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಬುಧವಾರ ಶ್ರೀಮದ್ ಎಡನೀರು ಮಠಕ್ಕೆ ಭೇಟಿ ನೀಡಿ ನೂತನ ಪೀಠಾಧಿಪತಿ ಶ್ರೀಸಚ್ಚಿದಾನಂದ ಭಾರತೀ ಪಾದಂಗಳವರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಮುಖಂಡರಾದ ಕೆ.ಪಿ. ಕುಂಞÂಕಣ್ಣನ್, ಕೆ. ನೀಲಕಂಠನ್, ಬಾಲಕೃಷ್ಣನ್ ಪೆರಿಯ ಮೊದಲಾದವರು ಜೊತೆಗಿದ್ದರು.