ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳು ಜಂಟಿರೂಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸುವ ಆಯುಷ್ ಗ್ರಾಮಂ ಯೋಜನೆಯ ಅಂಗವಾಗಿ ಉಚಿತ ಆನ್ ಲೈನ್ ಯೋಗ ತರಬೇತಿ ನೀಡಲಾಗುವುದು. ಕೋವಿಡ್ ಅವಧಿಯಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಆದ್ಯತೆ ನೀಡುವ ಆಸನ, ಪ್ರಾನಾಯಾಮ ಇತ್ಯಾದಿಗಳನ್ನು ತರಬೇತಿಯಲ್ಲಿ ಅಳವಡಿಸಲಾಗುವುದು. ಆಸಕ್ತರು ನ.23ರ ಮುಂಚಿತವಾಗಿ ದೂರವಾಣಿ ಸಂಖ್ಯೆ: 0467 2238477, 9497875085 ಯನ್ನು ಸಂಪರ್ಕಿಸಬಹುದು.