ಕಾಸರಗೋಡು: ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ರನ್ನು ಬಂಧಿಸಿರುವುದು ಬಿಜೆಪಿ ನಡೆಸಿರುವ ಪ್ರಬಲ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಮರುದ್ದೀನ್ ರನ್ನು ಪ್ರಕರಣಗಳಿಂದ ಪಾರುಗೊಳಿಸುವ ಸಿಪಿಎಂ-ಸರ್ಕಾರದ ಹುನ್ನಾರದ ವಿರುದ್ಧ ಸಾರ್ವಜನಿಕರಲ್ಲಿ ಎದ್ದಿರುವ ಆಕ್ರೋಶ ಪಿಣರಾಯಿ ನೇತೃತ್ವದ ಸರ್ಕಾರ ಮತ್ತು ಸಿಪಿಎಂನ ಚಿತ್ರಣವನ್ನು ಕಳಂಕಿತಗೊಳಿಸುವ ಕ್ರಮವಾಗಿರುವುದರಿಂದ ಮುಸ್ಲಿಂ ಲೀಗ್ ಮತ್ತು ಸಿಪಿಎಂ ಈ ನಾಟಕ ನಡೆಸಿದೆ. ಶಾಸಕರು ಸೇರಿದಂತೆ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕೋಟಿ ರೂಪಾಯಿಗಳ ವಂಚನೆ ಸಂಬಂಧ ಹಲವಾರು ದೂರುಗಳನ್ನು ನೀಡಿದ್ದರೂ ಪೆÇಲೀಸರು ಕಮರುದ್ದೀನ್ ಅವರನ್ನು ಬಂಧಿಸಿರಲಿಲ್ಲ. ಆದರೆ ತಿಂಗಳುಗಟ್ಟಲೆ ಬಿಜೆಪಿ ನಡೆಸಿದ ಪ್ರಬಲ ಪ್ರತಿಭಟನೆಯ ಕಾರಣ ಸರ್ಕಾರ ಮತ್ತು ಪೆÇಲೀಸರು ಕಮರುದ್ದೀನ್ ಅವರನ್ನು ಬಂಧಿಸುವಂತೆ ಒತ್ತಡಕ್ಕೊಳಗಾಯಿತು ಎಂದು ಶ್ರೀಕಾಂತ್ ಲೇವಡಿಗೈದಿರುವರು.
ಬಂಧಿತ ಶಾಸಕನ ವಿರುದ್ಧದ ಏಕೈಕ ಆರೋಪ ವಂಚನೆಯಾಗಿದೆ. ಕಂಪೆನಿಯ ನಿಯಮಗಳನ್ನು ಉಲ್ಲಂಘಿಸಿ ಶಾಸಕನ ನೇತೃತ್ವದ ಹೂಡಿಕೆ ನಡೆದಿರುವುದನ್ನು ತಿಳಿದೂ ತಿಳಿಯದಂತೆ ಪೆÇಲೀಸರು ನಟಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಜಿಲ್ಲೆಯಲ್ಲಿ ಸಿಪಿಎಂ ಮತ್ತು ಲೀಗ್ ನಡುವಿನ ಸಂಬಂಧವು ಜಿಲ್ಲೆಯಲ್ಲಿ ಭಾರೀ ಕೆಟ್ಟ ಪರಿಣಾಮ ಬೀರಲಿದೆ ಎಂಬ ಭಯದಿಂದ ಜನರಲ್ಲಿ ಚಿತ್ರಣವನ್ನು ಬದಲಾಯಿಸಲು ಮತ್ತು ಸರ್ಕಾರದ ಮುಖವನ್ನು ಉಳಿಸಲು ಈ ಬಂಧನ ನಾಟಕ ನಡೆಸಲಾಗಿದೆ ಎಂದು ಶಂಕಿಸಬೇಕಾಗಿದೆ. ಪ್ರಾಮಾಣಿಕತೆ ಇದ್ದರೆ ಕಮರುದ್ದೀನ್ ಸೇರಿದಂತೆ ಫ್ಯಾಶನ್ ಗೋಲ್ಡ್ ಮಾಲೀಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಸಿದ್ಧವಾಗಬೇಕು ಎಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.