ಕೊಚ್ಚಿ: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಗೆ ವಿಷಯದ ಬಗ್ಗೆ ಅರಿವು ಮಾತ್ರವಲ್ಲದೆ ಪೂರ್ಣ ಪ್ರಮಾಣದ ಕೈವಾಡವೂ ಇತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ ನ್ಯಾಯಾಲಯದಲ್ಲಿ ಗುರುವಾರ ತಿಳಿಸಿದೆ. ಇಡಿ ಪ್ರಕಾರ ಕಳ್ಳಸಾಗಣೆಯಿಂದ ಬರುವ ಆದಾಯವನ್ನು ಎಲ್ಲಿ ಠೇವಣಿ ಇಡಬೇಕೆಂದು ಶಿವಶಂಕರ್ ಸೂಚಿಸುತ್ತಿದ್ದರು. ಸ್ವಪ್ನಾ ಹಾಗೂ ಶಿವಶಂಕರ್ ನಡುವಿನ ವಾಟ್ಸಾಪ್ ಚಾಟ್‍ಗಳನ್ನು ಆಧರಿಸಿ ಈ ಅಂಶಗಳು ದೃಢಪಟ್ಟಿದೆ ಎಂದು ಇಡಿ ಸೂಚಿಸಿದೆ ಎಂದು ಎರ್ನಾಕುಳಂ ಪ್ರಧಾನ ಸೆಕ್ಷನ್ಸ್ ನ್ಯಾಯಾಲಯ ತಿಳಿಸಿದೆ.
ಶಿವಶಂಕರ್ ಅವರು ರಾಜತಾಂತ್ರಿಕ ವ್ಯವಸ್ಥೆ ಮೂಲಕ ಚಿನ್ನ ಹೊಂದಿರುವ ಚೀಲವನ್ನು ಬಚ್ಚಿಡಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಸ್ವಪ್ನಾಳ ಹೆಸರಿನಲ್ಲಿ ಮೂರನೇ ಲಾಕರ್ ತೆರೆಯಲು ಯೋಜಿಸಿದ್ದರು.ಈ ಬಗ್ಗೆ ನವೆಂಬರ್ 11 ರಂದು ವಾಟ್ಸಾಪ್ ಸಂದೇಶವನ್ನು ಕಳುಹಿಸಲಾಗಿತ್ತು ಎಂದು ಇಡಿ ತಿಳಿಸಿದೆ.
ಈ ಬಗ್ಗೆ ವಾದಿಸಿದ್ದ ಶಿವಶಂಕರ್ ಅವರ ವಕೀಲರು ಕಳೆದ ನಾಲ್ಕು ತಿಂಗಳಿನಿಂದ ಬಂಧನದಲ್ಲಿರುವ ಕಾರಣ ತೀವ್ರ ಮಾನಸಿಕ ಒತ್ತಡದಿಂದಾಗಿ ಶಿವಶಂಕರ್ ಅವರು ಅಪ್ರಬುದ್ದ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಶಿವಶಂಕರ್ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಇಡಿ ಪ್ರಕರಣ ದಾಖಲಿಸಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಮೂರು ತನಿಖಾ ಸಂಸ್ಥೆಗಳು ಮೂರು ರೀತಿಯಲ್ಲಿ ವರದಿ ನೀಡಿದೆ. ಎನ್.ಐ.ಎ ತನಿಖೆ ಮತ್ತು ಇಡಿ ತನಿಖೆಯ ನಡುವೆ ವೈರುಧ್ಯವಿದೆ. ಶಿವಶಂಕರ್ ವಿರುದ್ಧದ ಸಾಕ್ಷ್ಯಗಳು ಕೇವಲ ಆರೋಪಿಗಳ ಹೇಳಿಕೆಗಳನ್ನು ಆಧರಿಸಿವೆ ಎಂದು ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.