ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಕಲ್ಯಾಣ ಚಟುವಟಿಕೆ ಸಂಬಂಧಿಸಿ ಅತ್ಯುತ್ತಮ ವರದಿಗಾರಿಕೆಗೆ ನೀಡಲಾಗುವ ಡಾ.ಬಿ.ಆರ್.ಅಂಬೇಡ್ಕರ್ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಕೋರಲಾಗಿದೆ.
ಮುದ್ರಣ, ದೃಶ್ಯ, ಶ್ರಾವ್ಯ ಮಾಧ್ಯಮಗಳ ಅತ್ಯುತ್ತಮ ವರದಿಗಾರಿಕೆಗಾಗಿ ಈ ಪ್ರಶಸ್ತಿ ನೀಡಲಾಗುವುದು. 2019 ಆ.16ರಿಂದ 2020 ಆ.15 ವರೆಗಿನ ಕಾಲಾವಧಿಯಲ್ಲಿ ಪ್ರಕಟಿಸಲಾದ ಚರದಿ, ಕಾರ್ಯಕ್ರಮ ಇತ್ಯಾದಿಗಳನ್ನು ಪ್ರಶಸ್ತಿಗಾಗಿ ಪರಿಶೀಲಿಸಲಾಗುವುದು. ಮುದ್ರಣ ಮದ್ಯಮಗಳ ಸುದ್ದಿ/ಫೀಚರ್/ಸರಣಿ ಇತ್ಯಾದಿಗಳ 5 ನಕಲುಗಳನ್ನು ಸುದ್ದಿ ಸಂಪಾದಕರ ದೃಡೀಕರಣ ಪತ್ರ ಸಹಿತ ಸಲ್ಲಿಸಬೇಕು. ದೃಶ್ಯ ಮಾಧ್ಯಮಗಳ ಎಂಟ್ರಿಗಳನ್ನು ನ್ಯೂಸ್ ಸ್ಟೋರಿ ಯಾ ಕನಿಷ್ಠ 5 ಮಿನಿಷ ಅವಧಿಯ ಸುದ್ದಿ ವಿಶ್ಲೇಷಣೆ ಕಾರ್ಯಕ್ರಮ ಅಥವಾ ಸಾಕ್ಷ್ಯಚಿತ್ರ ಆಗಿರಬೇಕು. ಡಿ.ಟಿ.ಪಿ. ಫಾರ್ಮೇಟ್ ನಲ್ಲಿರುವ ಎಂಟ್ರಿ(5 ಪ್ರತಿಗಳು) ಸುದ್ದಿ ಸಂಪಾದಕರ ದೃಡೀಕರಣ ಪತ್ರ, ಎಂಟ್ರಿಗಳ ಕುರಿತು ಕಿರು ಮಾಹಿತಿ, ಅರ್ಜಿದಾರನ ದೂರವಾಣಿ ಸಂಖ್ಯೆ, ಭಾವಚಿತ್ರ(ಒಂದು ಪ್ರತಿ)ಇತ್ಯಾದಿ ಸಹಿತ ಸಲ್ಲಿಸಬೇಕು. ಶ್ರವ್ಯ ಮಾಧ್ಯಮಗಳಲ್ಲಿ ಪ್ರಸಾರ ನಡೆಸಿದ ಪರಿಶಿಷ್ಟ ಜಾತಿ-ಪಂಗಡ ಸಂಬಂಧ ಎಲ್ಲ ಕಾರ್ಯಕ್ರಮಗಳನ್ನು ಪ್ರಶಸ್ತಿಗಾಗಿ ಪರಿಶೀಲಿಸಲಾಗುವುದು. ಎಂಟ್ರಿಗಳು ಸಿ.ಡಿ. ರೂಪದಲ್ಲಿ ನಡೆಸಿ, ಕಿರು ಮಾಹಿತಿ, ಪ್ರಸಾರ ನಡೆಸಿದ ನಿಲಯದ ಕಾರ್ಯಕ್ರಮ ನಿರ್ದೇಶಕರ ದೃಡೀಕರಣ ಪತ್ರ ಸಹಿತ ಸಲ್ಲಿಸಬೇಕು. ಎಂಟ್ರಿಗಳನ್ನು ನ.25ರ ಮುಂಚಿತವಾಗಿ ಸಲ್ಲಿಸಬೇಕು. ಚೀಫ್ ಪಬ್ಲಿಸಿಟಿ ಆಫೀಸರ್, ಎಸ್.ಸಿ. ವಿಕಸನ ಡಿಪಾರ್ಟ್ ಮೆಂಟ್, ಅಯ್ಯಂಗಾಳಿ ಭವನ್, ಕನಕನಗರ್, ವೆಳ್ಳಯಂಬಲಂ, ತಿರುವನಂತಪುರಂ-3 ಎಂಬ ವಿಳಾಸಕ್ಕೆ ಸಲ್ಲಿಸವೇಕು. ಮಾಹಿತಿಗೆ :www.scdd.kerala.gov.in ದೂರವಾಣಿ ಸಂಖ್ಯೆ: 0471-2315375, 9446771177.