ಬೆಂಗಳೂರು: ಬಿನೀಶ್ ಕೊಡಿಯೇರಿಯನ್ನು ಸತತ ಎಂಟನೇ ದಿನವಾದ ನಿನ್ನೆಯೂ ಇಡಿ ವಿಚಾರಣೆ ನಡೆಸಿತು. ಬಿನೀಶ್ ಅವರ ಸಹಚರರೆಂದು ಗುರುತಿಸಲ್ಪಟ್ಟವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ನಿನ್ನೆಯ ವರೆಗೂ ಯಾರೂ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಪ್ರಕರಣದ ಪ್ರಗತಿಯ ಬಗ್ಗೆ ತನಿಖಾ ಅಧಿಕಾರಿ ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಿದ್ದಾರೆ. ಕೇರಳದ ವಿವಿಧ ಸ್ಥಳಗಳಲ್ಲಿ ತಪಾಸಣೆ ವೇಳೆ ವಶಪಡಿಸಿಕೊಂಡ ದಾಖಲೆಗಳನ್ನು ಈಗ ಇಡಿ ಪರಿಶೀಲಿಸುತ್ತಿದೆ. ಇತರ ಕೇಂದ್ರ ಸಂಸ್ಥೆಗಳು ಬಿನೀಶ್ ವಿರುದ್ಧ ಕ್ರಮ ಕೈಗೊಂಡಿದ್ದರೆ, ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಾರೆ ಎಂದು ತಿಳಿದುಬಂದಿದೆ.