ಕಾಸರಗೋಡು: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕಾಸರಗೋಡು ಬ್ಲಾಕ್ ಪಂಚಾಯತ್ ಮಟ್ಟದ ಸಭೆ ನಿನ್ನೆ ಜರುಗಿತು.
ದೇವಾಲಯಗಳ ಸಹಿತ ಆರಾಧನಾಲಯಗಳನ್ನು, ಧಾರ್ಮಿಕ ಸಂಸ್ಥೆಗಳನ್ನು ಚುನಾವಣೆ ಪ್ರಚಾರದ ವೇದಿಕೆಗಳಾಗಿಸಕೂಡದು, ಜಾತಿ, ಧರ್ಮ, ಭಾಷೆ ಇತ್ಯಾದಿಗಳ ವಿಷಯಗಳಲ್ಲಿ ಸಮಾಜದಲ್ಲಿ ಭಿನ್ನತೆಯುಂಟುಮಾಡುವ, ಈಗಾಗಲೇ ಹಲವು ವಿಚಾರಗಳಲ್ಲಿ ತಲೆದೋರಿರುವ ಬಿರುಕುಗಳನ್ನು ಹೆಚ್ಚಳಗೊಳಿಸುವ, ಪರಸ್ಪರ ದ್ವೇಷ ಉತ್ತೇಜಿಸುವ ಇತ್ಯಾದಿ ಚುಟುವಟಿಕೆಗಳನ್ನು ನಡೆಸಕೂಡದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಕಾಸರಗೋಡು ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಬ್ಲೋಕ್ ಮಟ್ಟದ ಚುನಾವಣೆ ಅಧಿಕಾರಿಯಾಗಿರುವ ವಲಯ ಕಂದಾಯಾಧಿಕಾರಿ ವಿ.ಜೆ.ಶಂಸುದ್ದೀನ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಖಾಲಿದ್, ಬಿ.ಮೂಸಾ, ನ್ಯಾಯವಾದಿ ಬಶೀರ್ ಆಲಡಿ, ಸಹಾಯಕ ಚುನಾವಣೆ ಅಧಿಕಾರಿಯಾಗಿರುವ ಬಿ.ಡಿ.ಒ. ಎಸ್.ಅನುಪಮ್, ಶುಚಿತ್ವ ಮಿಷನ್ ಸಂಚಾಲಕಿ ಎ.ಲಕ್ಷ್ಮಿ ಉಪಸ್ಥಿತರಿದ್ದರು.