HEALTH TIPS

ಅತಿಯಾದ ವಾಯುಮಾಲಿನ್ಯ: ಕೆಲ ದಿನಗಳ ಮಟ್ಟಿಗೆ ದೆಹಲಿ ತೊರೆಯುವಂತೆ ಸೋನಿಯಾ ಗಾಂಧಿಗೆ ಸೂಚನೆ

      ನವದೆಹಲಿ: ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಲವು ದಿನಗಳವರೆಗೆ ದೆಹಲಿಯಿಂದ ಬೇರೆಡೆ ಸ್ಥಳ ಬದಲಾವಣೆಗೆ ಸೂಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದ ವಾಯುಮಾಲಿನ್ಯವಿರುವ ಕಾರಣ ಸೋನಿಯಾ ಅವರ ಆರೋಗ್ಯದ ಮೇಲೆ ಅದು ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂಬ ಹಿನ್ನೆಲೆ ಈ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.

      ಸೋನಿಯಾ ಗಾಂಧಿ ಕೆಲವು ದಿನಗಳವರೆಗೆ ಗೋವಾ ಅಥವಾ ಚೆನ್ನೈಗೆ ಸ್ಥಳಾಂತರಗೊಳ್ಳಬಹುದು ಎಂದು ಮೂಲವೊಂದು ತಿಳಿಸಿದೆ.

      ಸೋನಿಯಾ ಶುಕ್ರವಾರ ಮಧ್ಯಾಹ್ನ ದೆಹಲಿಯಿಂದ ತೆರಳುವ ಸಾಧ್ಯತೆಯಿದೆ ಮತ್ತು ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

       ಕಳೆದ ಆಗಸ್ಟ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೋನಿಯಾ ಗಾಂಧಿ ನಿಯಮಿತವಾಘಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಎದೆಯ ಸೋಂಕು ಹಾಗೆಯೇ ಇದ್ದು ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ, ಸೋಂಕು ಕಡಿಮೆಯಾಗಿಲ್ಲದೆ ಇರಲು ದೆಹಲಿಯಲ್ಲಿನ ವಾಯುಮಾಲಿನ್ಯ ಕಾರಣವೆಂದು ಮೂಲಗಳು ಉಲ್ಲೇಖಿಸಿದೆ.

      ದೆಹಲಿಯಲ್ಲಿನ ವಾಯುಮಾಲಿನ್ಯವು ಸೋನಿಯಾ ಅವರ ಆಸ್ತಮಾ ಮತ್ತು ಹೃದಯದ ಆರೋಗ್ಯ ಸ್ಥಿತಿಯನ್ನು ಮತಷ್ಟು ಉಲ್ಬಣಗೊಳಿಸಿದೆ. ಹಾಗಾಗಿ ಇದೀಗ ಅವರು ದೆಹಲಿಯಿಂದ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ವೈದ್ಯರು ಸೂಚಿಸಿದ್ದಾರೆ.

      ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಪಕ್ಷದ ಕೆಲ ಮುಖಂಡರು ಆತ್ಮಾವಲೋಕನಕ್ಕಾಗಿ ಬೇಡಿಕೆ ಇಡುತ್ತಿರುವ ಈ ಸಮಯದಲ್ಲಿ ಸೋನಿಯಾ ದೆಹಲಿಯಿಂದ ದೂರ ಹೋಗುತ್ತಿದ್ದಾರೆ. ಕಳೆದ . ಜುಲೈ 30 ಸಂಜೆ ಸೋನಿಯಾ ಗಾಂಧಿಯನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೆಪ್ಟೆಂಬರ್ 12 ರಂದು, ಅವರು ತಮ್ಮ ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಕೆಲವು ದಿನಗಳವರೆಗೆ ವಿದೇಶಕ್ಕೆ ಹೋಗಿದ್ದರು.  ಆ ನಂತರ ಸೆಪ್ಟೆಂಬರ್ 14 ರಿಂದ 23 ರವರೆಗೆ ಸಾಂಕ್ರಾಮಿಕದ ವೇಳೆ ನಡೆದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಇಬ್ಬರೂ ನಾಯಕರು ಹಾಜರಿರಲಿಲ್ಲ.

     ಇದಲ್ಲದೆ ಕಳೆದ ವರ್ಷ ಜನವರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಗೋವಾಗೆ ಸ್ಥಳಾಂತರಗೊಂಡಿದ್ದರು, ಅಲ್ಲಿ ಅವರ ಸೈಕ್ಲಿಂಗ್ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries