ಮಂಜೇಶ್ವರ: ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 12 ನೇ ಯೋಜನೆ ಮೊತ್ತವನ್ನು
ಬದಿಯಡ್ಕ ಗ್ರಾಮ ಪಂಚಾಯತಿ ಬೇಳ ನಿವಾಸಿ ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿರುವ ಜಯಪ್ರಕಾಶ್ ಆಳ್ವ (45) ಎಂಬವರಿಗೆ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಬೇಳರವರಿಗೆ ಸ್ವ - ಗೃಹದಲ್ಲಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಸದಸ್ಯರಾದ ಜೀವನ್ ಕುಮಾರ್ ಚಿಗುರುಪಾದೆ, ಸ್ಥಾಪಕ ರತನ್ ಕುಮಾರ್ ಹೊಸಂಗಡಿ ನಿಯೋಗದಲ್ಲಿದ್ದರು. ದಿ. ನಾರಾಯಣ ಆಳ್ವ - ಯಮುನ ದಂಪತಿಯ ಪುತ್ರರಾಗಿರುವ ಜಯಪ್ರಕಾಶ್ ರವರು ಬೇಳ ಬಸ್ ತಂಗುದಾಣ ಬಳಿ ತರಕಾರಿ ಮಾರಿ ಲಭಿಸುವ ಅಲ್ಪ ಮೊತ್ತದಲ್ಲಿ ಪತ್ನಿ ಆಶಾ ಹಾಗೂ ಮಕ್ಕಳಾದ ಬೇಳ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳಾಗಿರುವ 7 ನೇ ತರಗತಿಯಲ್ಲಿ ಕಲಿಯುವ ಆದರ್ಶ್ ಆಳ್ವ ಹಾಗೂ 2 ನೇ ತರಗತಿಯಲ್ಲಿ ಕಲಿಯುತ್ತಿರುವ ಆರಾಧ್ಯ ಪಿ. ಆಳ್ವ ರ ಜೊತೆ ಜೀವನ ಸಾಗಿಸುವ ಮಧ್ಯೆ ಜಯಪ್ರಕಾಶ್ ರಿಗೆ ಕಳೆದ 7 ತಿಂಗಳ ಹಿಂದೆ ಕಿಡ್ನಿ ವೈಫಲ್ಯ ವುಂಟಾಗಿ ಇದೀಗ ಡಯಾಲಿಸಿಸ್ ಚಿಕಿತ್ಸೆಗೊಳಗಾಗುತ್ತಿದ್ದಾರೆ. ಈ ಮಧ್ಯೆ ಇತ್ತೀಚೆಗೆ ಕೆಲಸ ನಿಮ್ಮಿತ ಕನ್ನಪಾಡಿಗೆ ತೆರಳಿ ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂದಿರುಗುವ ಮಧ್ಯೆ ನೀರ್ಚಾಲ್ ನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕೆಲಸಕ್ಕೆ ತೆರಳಲು ಅಸಾಧ್ಯದ ಸ್ಥಿತಿ ಇದೆ. ಈ ಪರಿಸ್ಥಿತಿಯನ್ನರಿತು ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ನೆರವನ್ನು ನೀಡಿದೆ.