ತಿರುವನಂತಪುರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಶೋಭಾ ಸುರೇಂದ್ರನ್ ಅವರು ಬಿಜೆಪಿ ರಾಜ್ಯ ನಾಯಕತ್ವವನ್ನು ತೀವ್ರವಾಗಿ ಟೀಕಿಸಿದ್ದಾರೆ. ಜೊತೆಗೆ ರಾಜ್ಯ ಘಟಕದ ಅಸಮರ್ಥ ನಾಯಕತ್ವ, ವಂಚನೆಗಳ ಬಗ್ಗೆ ಪತ್ರವನ್ನು ಕೇಂದ್ರ ನಾಯಕತ್ವಕ್ಕೆ ಸಲ್ಲಿಸಿದರು.
ಈ ಪತ್ರವನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳಿಸಲಾಯಿತು. ತನ್ನ ವಿರುದ್ಧದ ಆತ್ಮ ಹಾನಿಕರ ವಿವಾದ ಸೃಷ್ಟಿಸಿದ ವ್ಯಕ್ತಿಗಳ ಬಗ್ಗೆ ಪಕ್ಷ ತನಿಖೆ ನಡೆಸಬೇಕೆಂದು ಶೋಭಾ ಸುರೇಂದ್ರನ್ ಒತ್ತಾಯಿಸಿದರು. ಅವರು ಐದು ವರ್ಷಗಳ ಕಾಲ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಅವರನ್ನು ಏಕಪಕ್ಷೀಯವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಇಳಿಸಲಾಯಿತು. ಇದಕ್ಕೆ ಕಾರಣ ಸುರೇಂದ್ರನ ಬಗೆಗಿನ ವೈಯಕ್ತಿಕ ದ್ವೇಷ. ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲ್ಪಟ್ಟ ಎ.ಎನ್. ರಾಧಾಕೃಷ್ಣನ್ ಅವರನ್ನು ಕೋರ್ ಸಮಿತಿಯಲ್ಲಿ ಸೇರಿಸಿದ ಪಕ್ಷದ ಮುನ್ನೆಲೆಯಿಂದ ತೆಗೆದು ಹಾಕಲಾಯಿತು. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಮಾನದ ಬದಲಾವಣೆಯನ್ನು ಒ ರಾಜಗೋಪಾಲ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಚರ್ಚಿಸಿಲ್ಲ. ತನ್ನನ್ನು ಫೆÇೀನ್‍ನಲ್ಲಿ ಕೂಡಾ ಸಂಪರ್ಕಿಸಿಲ್ಲ ಎಂದು ಶೋಭಾ ಸುರೇಂದ್ರನ್ ಪತ್ರದಲ್ಲಿ ಆರೋಪಿಸಿದ್ದಾರೆ.
ಶೋಭಾ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿದೆಯೇ ಎಂದು ಕೇಳಿದಾಗ, ಅರ್ಹತೆಯ ಆಧಾರದ ಮೇಲೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸುರೇಂದ್ರನ್ ಹೇಳಿದ್ದರು. ನೀವು ರಾಜಕೀಯವಾಗಿ ಕಾರ್ಯನಿರ್ವಹಿಸಲು ಅರ್ಹತೆ ಹೊಂದಿಲ್ಲ ಎಂದು ಸಾರ್ವಜನಿಕವಾಗಿ ಹೇಳುವುದು ಶಿಸ್ತಿನ ಉಲ್ಲಂಘನೆಯಲ್ಲವೇ? 2004 ರಲ್ಲಿ, ಪಿ.ಎಸ್.ಶ್ರೀಧರನ್ ಪಿಳ್ಳೈ ಅಧ್ಯಕ್ಷರಾಗಿದ್ದಾಗ, ಸುರೇಂದ್ರನ್ ತಮ್ಮ ರಾಜಕೀಯ ಜೀವನವನ್ನು ಉಪಾಧ್ಯಕ್ಷರಾಗಿ 16 ವರ್ಷಗಳ ಹಿಂದಕ್ಕೆ ತೆಗೆದುಕೊಂಡರು. ಆದರೂ ಅವರು ಎಂಟು ತಿಂಗಳು ಮೌನವಾಗಿದ್ದರು ಮತ್ತು ಪಕ್ಷದ ವಿರುದ್ಧ ಒಂದು ಮಾತನ್ನೂ ಹೇಳದೆ ನೋಡುತ್ತಿದ್ದರು. ಬಳಿಕ ಕೆಲವರು ಸಮೂಹ ಮಾಧ್ಯಮವನ್ನು ತನ್ನ ವಿರುದ್ದ ಮಾನಹಾನಿಗೆ ಬಳಸಿಕೊಂಡರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಜಿಲ್ಲೆಯ ಪಾಲಕ್ಕಾಡ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರೂ ಸುರೇಂದ್ರನ್ ಮತ್ತು ಕೇಂದ್ರ ಸಚಿವ ವಿ ಮುರಾಲೀಧರನ್ ಅವರ ಕೈವಾಡದಿಂದ ಅಟ್ಟಿಂಗಲ್ ಕ್ಷೇತ್ರಕ್ಕೆ ಕಳಿಸಲಾಯಿತು ಎಂದು ಪತ್ರದಲ್ಲಿ ಶೋಭಾ ಸುರೇಂದ್ರನ್ ಆರೋಪಿಸಿದ್ದಾರೆ.