ಬದಿಯಡ್ಕ: ಸಂಸದ್ ಆದರ್ಶ್ ಗ್ರಾಮ ಯೋಜನೆ ಪ್ರಕಾರ ಮಾದರಿ ಗ್ರಾಮವಾಗಿ ಬದಲಿಸುವ ನಿಟ್ಟಿನಲ್ಲಿ ಆಯ್ಕೆಗೊಂಡಿರುವ ಕುಂಬ್ಡಾಜೆ ಗ್ರಾಮಪಂಚಾಯತಿಯಲ್ಲಿ ಪೂರ್ವಭಾವಿ ಚಟುವಟಿಕೆಗಳ ಅಂಗವಾಗಿ ಸ್ಥಾಪಿಸಲಾದ ಆಟೋಮೆಟಿಕ್ ಹ್ಯಾಂಡ್ ಸಾನಿಟೈಸರ್ ಮೆಷಿನ್ನ ಸ್ವಿಚ್ ಆನ್ ಚಟುವಟಿಕೆಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮಂಗಳವಾರ ನಡೆಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡತನ ನಿವಾರಣೆ ವಿಭಾಗ ಯೋಜನೆ ನಿರ್ದೇಶಕ ಕೆ.ಪ್ರದೀಪನ್, ಪ್ರಭಾರ ಅಧಿಕಾರಿ ಮುಹಮ್ಮದ್ ಮದನಿ ಯೋಜನೆಯ ಮಾಹಿತಿ ನೀಡಿದರು. ಕಲ್ಯಾಣ ಸಮಿತಿ ಅಧ್ಯಕ್ಷ ನ್ಯಾಯವಾದಿ ಕಾಸಿಂ, ಕಾರ್ಯದರ್ಶಿ ಅಚ್ಯುತ ಮಣಿಯಾಣಿ, ವಿವಿಧ ವಲಯಗಳ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ಸುಹರಾ ಸ್ವಾಗತಿಸಿ, ಉಪಾಧ್ಯಕ್ಷ ಆನಂದ ಕೆ.ಮವ್ವಾರ್ ವಂದಿಸಿದರು.