ತಿರುವನಂತಪುರ: ಕೇರಳ ಮಕ್ಕಳ ಹಕ್ಕು ಆಯೋಗ ಜಾರಿ ನಿರ್ದೇಶನಾಲಯಕ್ಕೆ ನೊಟಿಸ್ ಜಾರಿಗೊಳಿಸಿದೆ.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ದಾಳಿ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ 2 ವರ್ಷದ ಮೊಮ್ಮಗುವಿಗೆ ಆಹಾರ ನೀಡುವುದಕ್ಕೆ, ಹಾಲೂಡಿಸುವುದಕ್ಕೂ ಬಿಟ್ಟಿಲ್ಲ, ಮನೆಯ ಒಳಗೆ ಬಂಧಿಯಾಗಿದ್ದ ಮಗುವನ್ನು ನೋಡುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಬಿನೀಶ್ ಕೊಡಿಯೇರಿ ಅವರ ಪತ್ನಿಯ ತಂದೆ ಕೇರಳ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದರು.
ದೂರು ದಾಖಲಾದ ಅನ್ವಯ ಕೆಸಿಆರ್ ಸಿ ಅಧ್ಯಕ್ಷ ಮನೋಜ್ ಕುಮಾರ್ ಕೆವಿ ಬಿನೀಶ್ ಅವರ ಮನೆಗೆ ತೆರಳಿ ಪರಿಶೀಲಿಸಿ ಇ.ಡಿ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ಡ್ರಗ್ ಪೂರೈಕೆ ಪ್ರಕರಣದಲ್ಲಿ ಜಾರು ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬಿನೀಶ್ ಕೊಡಿಯೇರಿ ಪತ್ನಿ ಇಡಿ ಅಧಿಕಾರಿಗಳ ವಿರುದ್ಧ ಮಹಜರ್ ಗೆ ಒತ್ತಾಯಪೂರ್ವಕ ಸಹಿ ಹಾಕಿಸಿಕೊಳ್ಳುವ ಗಂಭೀರ ಆರೋಪ ಮಾಡಿದ್ದರು.