ಪತ್ತನಂತಿಟ್ಟು: ಮಂಡಲ ಪೂಜಾ ಸಂಭ್ರಮದಲ್ಲಿರುವ ಶಬರಿಮಲೆಯಲ್ಲಿ ಮತ್ತೊಬ್ಬರಿಗೂ ಇದೀಗ ಕೋವಿಡ್ ದ್ರಢಪಡಿಸಲಾಗಿದೆ.ಸನ್ನಿಧಿಯ ದೇವಸ್ವಂ ಬೋರ್ಡ್ ಓವರ್ಸಿಯರ್ ಓರ್ವರಿಗೆ ಕೋವಿಡ್ ಬಾಧಿಸಿದೆ.ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಪಂಪೆಯಲ್ಲಿ ನಡೆಸಲಾದ ಪ್ರತಿಜನಕ ಪರೀಕ್ಷೆಯಲ್ಲಿ ಸೋಂಕು ಖಚಿತಗೊಂಡಿದೆ. ರೋಗಲಕ್ಷಣಗಳ ಕಾರಣ ಇತರ ಗುತ್ತಿಗೆ ಹಾಗೂ ಖಾಯಂ ಉದ್ಯೋಗಿಗಳಿಗೆ ಪಿಪಿಇ ಕಿಟ್‌ಗಳನ್ನು ಒದಗಿಸುವಂತೆ ದೇವಸ್ವಂ ಮಂಡಳಿಗೆ ನಿರ್ದೇಶಿಸಲಾಗಿದೆ.
ಶಬರಿಮಲೆಗೆ ನಕಾರಾತ್ಮಕ ಪ್ರಮಾಣಪತ್ರ ಹೊಂದಿರುವವರಿಗೆ, ಮಾತ್ರ ಪ್ರವೇಶವೆಂದು ಈಗಾಗಲೇ ನಿರ್ದೇಶನ ನೀಡಲಾಗಿತ್ತು. ನಕಾರಾತ್ಮಕ ಪ್ರಮಾಣಪತ್ರವನ್ನು ಹೊಂದಿರದವರಿಗೆ ನಿಲಕ್ಕಲ್ ನಲ್ಲಿ ಪ್ರತಿಜನಕ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಪಾಸಿಟಿವ್ ಇದ್ದಲ್ಲಿ ರಾನ್ನಿಯ ಸಿಎಫ್‌ಎಲ್‌ಟಿಸಿಗೆ ವರ್ಗಾಯಿಸಲಾಗುತ್ತದೆ.