ಕುಂಬಳೆ: ನೀರಿನ ಕೊರತೆ ತೀವ್ರವಾಗಿರುವ ಮಂಜೇಶ್ವರ ಬ್ಲೋಕ್ ನ ಪುತ್ತಿಗೆ ಗ್ರಾಮ ಪಂಚಾಯತ್ ನ ಅನೋಡಿ ಪಳ್ಳದ ಸಂರಕ್ಷಣೆಗೆ ಯೋಜನೆ ಸಿದ್ಧವಾಗಿದೆ.
50 ಲಕ್ಷ ರೂ. ವೆಚ್ಚದ ಅಂದಾಜಿನ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ನ.5 ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
ಎಚ್.ಎ.ಎಲ್.-ಸಿ.ಎಸ್.ಆರ್.ನಿಧಿ ಬಳಸಿ ರಾಜ್ಯ ಸರಕಾರ ಈ ಯೋಜನೆ ಜಾರಿಗೊಳಿಸಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಲಸಂರಕ್ಷಣೆ ಚಟುವಟಿಕೆಗಳು ನಡೆಯಲಿವೆ. 5 ಕೋಟಿ ಲೀಟರ್ ಜಲಸಂರಕ್ಷಣೆ ಸಾಮಥ್ರ್ಯ ಹೊಮದಿರುವ ಅನೋಡಿ ಪಳ್ಳ ಸದ್ರಿ ಮಣ್ಣು ಕುಸಿದು , ತ್ಯಾಜ್ಯ ತುಂಬಿ ವಿನಾಶದ ಅಂಚಿನಲ್ಲಿದೆ. ಪಳ್ಳದ ಅಭಿವೃದ್ಧಿ ಮೂಲಕ ಸ್ಥಲೀಯ ಮಟ್ಟದ ಭೂಗರ್ಣ ಜಲ ಹೆಚ್ಚಳ, ಕುಡಿಯುವ ನೀರಿನ ಲಭ್ಯತೆ, ಕೃಷಿಗೆ ನೀರಿನ ಪೂರೈಕೆ ಖಚಿತಪಡಿಸಲು ಸಾಧ್ಯವಾಗಲಿದೆ. ಜೊತೆಗೆ ಕೃಷಿಯನ್ನು ಪ್ರಧಾನ ಕಾಯಕವಾಗಿಸುವವರಿಗೆ ಇದು ಪೂರಕವಾಗಲಿದೆ.