HEALTH TIPS

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ-ಶಾಲಾ ಪಠ್ಯದಲ್ಲಿ ಯಕ್ಷಗಾನ: ಪ್ರೊ. ಎಂ.ಎ. ಹೆಗಡೆ

         ಮಂಗಳೂರು: ಯಕ್ಷಗಾನವನ್ನು ಶಾಲಾ ಪಠ್ಯವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಈಗಾಗಲೇ ಕಾರ್ಯಚಟುವಟಿಕೆ ಆರಂಭಿಸಿದೆ. ಸರಕಾರದ ಆದೇಶ ಶೀಘ್ರದಲ್ಲಿ ಪ್ರಕಟವಾಗಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ತಿಳಿಸಿದ್ದಾರೆ.

         ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ರವಿವಾರ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಶಾಲೆಯಲ್ಲಿ ಯೋಗ, ನೃತ್ಯ, ಸಂಗೀತದಂತೆ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಆಗ್ರಹವನ್ನು ಈಗಾಗಲೇ ಸರಕಾರದ ಮುಂದಿಡಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರಕಿದೆ. ಪಠ್ಯಪುಸ್ತಕ ನಿರ್ದೇಶನಾಲಯವು ಈ ಕುರಿತಂತೆ ಮುಂದಿನ ಹೆಜ್ಜೆ ಇಡಲಿದೆ. ಶೀಘ್ರದಲ್ಲಿ ಸರಕಾರದಿಂದ ಆದೇಶ ಬರುವ ನಿರೀಕ್ಷೆಯಿದ್ದು, ಪಠ್ಯ ಪುಸ್ತಕ ರಚನೆ ಸಮಿತಿ ನೇಮಕವಾಗಲಿದೆ ಎಂದರು.

ಪ್ರಶಸ್ತಿಗೆ ಅರ್ಜಿ ಬೇಕಿಲ್ಲ
       ಯಕ್ಷಗಾನ ಅಕಾಡೆಮಿಯಲ್ಲಿ ಅರ್ಜಿ ಹಾಕದೆ ಪ್ರಶಸ್ತಿ ನೀಡಲಾಗುತ್ತಿದೆ. ಅರ್ಜಿ ಹಾಕಿದವರಿಗೆ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ನನ್ನ ಅವಧಿಯಲ್ಲಿ ಪಾಲಿಸಲಿಲ್ಲ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮೇಯರ್‌ ದಿವಾಕರ ಪಾಂಡೇಶ್ವರ ಮಾತನಾಡಿ, ಮುಂದಿನ ಪೀಳಿಗೆಗಾಗಿ ಯಕ್ಷಗಾನವನ್ನು ಮತ್ತಷ್ಟು ವಿಸ್ತಾರವಾಗಿ ಬೆಳಸಬೇಕಾಗಿದೆ ಎಂದರು.

       ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ವ್ಯಾಕರಣ ಬದ್ಧ ಕನ್ನಡ ಕಾಣಬೇಕಾದರೆ ಅದು ಯಕ್ಷಗಾನ ವೇದಿಕೆಯಲ್ಲಿ ಮಾತ್ರ ಸಾಧ್ಯ. ಯಕ್ಷಗಾನದ ಸತ್ವ ಶಾಸ್ತ್ರೀಯ ಚೌಕಟ್ಟಿನೊಳಗೆ ಸೀಮೋಲ್ಲಂಘನೆವಾಗಲಿ ಎಂದು ಹಾರೈಸಿದರು.

       ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್‌ ಕತ್ತಲಸಾರ್‌ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡಲು ಎಂದೆಂದಿಗೂ ಬದ್ಧವಿದೆ ಎಂದರು.

ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌. ಎಚ್‌. ಶಿವರುದ್ರಪ್ಪ ಸ್ವಾಗತಿಸಿದರು. ರಾಧಾಕೃಷ್ಣ, ಯೋಗೀಶ್‌ ರಾವ್‌, ದಾಮೋದರ್‌ ಅವರು ಪ್ರಶಸ್ತಿ ಪುರಸ್ಕೃತರ ವಿವರ ಓದಿದರು. ಕದ್ರಿ ನವನೀತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪುರಸ್ಕೃತರು
        ಚಂದ್ರಶೇಖರ ದಾಮ್ಲೆ ಅವರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕಾರ, ಕುರಿಯ ಗಣಪತಿ ಶಾಸ್ತ್ರಿ ಮತ್ತು ಉಬರಡ್ಕ ಉಮೇಶ್‌ ಶೆಟ್ಟಿ ಅವರಿಗೆ 2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕಾರ ಪ್ರದಾನಿಸಲಾಯಿತು. ಮಂಜುನಾಥ ಭಟ್‌ ಹೊಸ್ತೋಟ ಅವರು ರಚಿಸಿದ ಯಕ್ಷಗಾನ “ವೀರಾಂಜನೇಯ ವೈಭವ’ ಕೃತಿಯು 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದು, ಲೇಖಕರು ನಿಧನಹೊಂದಿರುವ ಕಾರಣ ಪುಸ್ತಕ ಮುದ್ರಿಸಿದ ಶ್ರೀ ಗುರುದೇವ ಪ್ರಕಾಶನಕ್ಕೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ಯಶವಂತ ವಿಟ್ಲ ಅವರು ಸ್ವೀಕರಿಸಿದರು. “ಅಗರಿ ಮಾರ್ಗ’ ಕೃತಿಗಾಗಿ ಕೃಷ್ಣಪ್ರಕಾಶ್‌ ಉಳಿತ್ತಾಯ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನಿಸಲಾಯಿತು.


               ಕಾಸರಗೋಡಿಗೆ ಹೆಮ್ಮೆ:

    ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮೂಲಕ ನೀಡಲಾಗುವ ಪ್ರಶಸ್ತಿ ಸುಧೀರ್ಘ ಕಾಲದ ಬಳಿಕ ಪ್ರಸ್ತುತ ಸಾಲಿನಲ್ಲಿ ಕಾಸರಗೋಡು ಜಿಲ್ಲೆಗೂ ಪ್ರಾಪ್ತವಾಗಿರುವುದು ಗಡಿನಾಡಿಗೆ ಹೆಮ್ಮೆಯಾಗಿದೆ. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಈಬಾರಿಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಗಮನಾರ್ಹವಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries