HEALTH TIPS

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದ ಡೊನಾಲ್ಡ್ ಟ್ರಂಪ್: ಭಾಷಣ ಅರ್ಧಕ್ಕೆ ಕಡಿತಗೊಳಿಸಿದ ನ್ಯೂಸ್ ಚಾನೆಲ್ ಗಳು!

       ವಾಷಿಂಗ್ಟನ್: ತಮಗೆ ಬಂದ ಮತಗಳನ್ನು ಕದಿಯಲಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುತ್ತಿದ್ದಂತೆ ಅಮೆರಿಕದ ಎಬಿಸಿ, ಸಿಬಿಎಸ್ ಮತ್ತು ಎನ್ ಬಿಸಿ ನ್ಯೂಸ್ ಚಾನೆಲ್ ಗಳು ಭಾಷಣದ ಪ್ರಸಾರವನ್ನು ಕಡಿತಗೊಳಿಸಿದ ಪ್ರಸಂಗ ನಡೆದಿದೆ.

      ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಮತದಾನದಲ್ಲಿ ಅಕ್ರಮ ನಡೆದಿದೆ, ತಮಗೆ ಬಂದಿರುವ ಮತಗಳನ್ನು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಅವರಿಗೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಭಾಷಣ ಮಾಡುತ್ತಿದ್ದರು. ಆಗ ಎಂಎಸ್ ಎನ್ ಬಿಸಿ ನ್ಯೂಸ್ ಚಾನೆಲ್ ನ ಬ್ರೈನ್ ವಿಲಿಯಮ್ ಮದ್ಯದಲ್ಲಿಯೇ ಪ್ರಸಾರವನ್ನು ತಡೆದರು. ಫಾಕ್ಸ್ ನ್ಯೂಸ್ ಚಾನೆಲ್ ಮತ್ತು ಸಿಎನ್ ಎನ್ ಮಾತ್ರ ಅಧ್ಯಕ್ಷರ ಸಂಪೂರ್ಣ ಭಾಷಣವನ್ನು ಪ್ರಸಾರ ಮಾಡಿದವು. ನಂತರ ಮಾತನಾಡಿದ ಸಿಎನ್ ಎನ್ ನ ಆಂಡೆರ್ಸನ್ ಕೂಪರ್ , ಟ್ರಂಪ್ ಅವರು ಸೋಮಾರಿ ಆಮೆಯಂತೆ,ತಮ್ಮ ಅಧ್ಯಕ್ಷ ಅವಧಿ ಮುಗಿದಿದೆ ಎಂದು ಗೊತ್ತಾದ ಕೂಡಲೇ ಬಿಸಿಲಿನಲ್ಲಿ ಹೊಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

      ಅನೇಕ ನ್ಯೂಸ್ ಚಾನೆಲ್ ಗಳು ಟ್ರಂಪ್ ಅವರನ್ನು ತೀವ್ರವಾಗಿ ಟೀಕಿಸಿದೆ. ಎನ್ ಬಿಸಿಯ ಲೆಸ್ಟರ್ ಹೊಲ್ಟ್, ಅಧ್ಯಕ್ಷರು ಅನೇಕ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ನಾವಿಲ್ಲಿ ಅವರ ಭಾಷಣಕ್ಕೆ ತಡೆಹಿಡಿಯಲೇ ಬೇಕಾಗುತ್ತದೆ. ಮತಗಳಲ್ಲಿ ಮೋಸವಾಗಿದೆ ಎಂಬುದು ಸಹ ತಪ್ಪು. ಅದಕ್ಕೆ ಏನು ಸಾಕ್ಷಿಯಿದೆ ಎಂದು ಕೇಳಿದ್ದಾರೆ.

      ಟ್ರಂಪ್ ಅವರು ಮಾಡುತ್ತಿರುವ ಭಾಷಣಗಳ, ಆರೋಪಗಳ ಕುರಿತು ನಿಖರತೆ ತಿಳಿಯಿರಿ ಎಂದು ಎಂಎಸ್ಎನ್ ಬಿಸಿ ಮಾಧ್ಯಮದ ಆಂಕರ್ ತಮ್ಮ ವರದಿಗಾರರಿಗೆ ಹೇಳಿದರು. ಕಾನೂನಿನ ಮೂಲಕ ಮತಗಳನ್ನು ಸರಿಯಾಗಿ ಎಣಿಕೆ ಮಾಡಿದರೆ ತಾವು ಸುಲಭವಾಗಿ ಗೆಲ್ಲುತ್ತೇನೆ ಎಂಬುದು ಟ್ರಂಪ್ ವಾದವಾಗಿದೆ. ಆದರೆ ಅಕ್ರಮ ಮತದಾನವಾದ ಬಗ್ಗೆ ಸಾಕ್ಷಿಗಳಿಲ್ಲ ಎಂಬುದು ಸಿಬಿಎಸ್ ಮಾಧ್ಯಮದ ವರದಿಗಾರ ನಾನ್ಸಿ ಕೋರ್ಡ್ಸ್ ಅವರ ಹೇಳಿಕೆ. ಮತಗಳು ತಡವಾಗಿ ಮತ ಎಣಿಕೆಗೆ ಬಂದಿವೆ ಎಂಬ ಟ್ರಂಪ್ ಆರೋಪ ಮತ್ತೊಂದು ಸುಳ್ಳು ಎಂದು ಅವರು ಹೇಳುತ್ತಾರೆ.

      ದೇಶದ ಅಧ್ಯಕ್ಷರು ಈ ರೀತಿ ಮತದಾನದಲ್ಲಿ ಅಕ್ರಮವಾಗಿ, ಮತಗಳನ್ನು ಕದಿಯಲಾಗಿದೆ ಎಂದು ಹೇಳುವುದು ದೇಶದ ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ದುಃಖಕರ ವಿಷಯವಾಗಿದೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವುದು ನಿಜಕ್ಕೂ ಖೇದಕರ ಎಂದು ಸಿಎನ್ಎನ್ ನ ಜೇಕ್ ಟ್ಯಾಪ್ಪರ್ ಹೇಳುತ್ತಾರೆ.

     ಟ್ರಂಪ್ ಅವರ ಮಾಧ್ಯಮ ಸಹವರ್ತಿಯಾದ ನ್ಯೂಯಾರ್ಕ್ ಪೋಸ್ಟ್, ಶ್ವೇತಭವನ ಭಾಷಣದಲ್ಲಿ ಅಧ್ಯಕ್ಷ ಟ್ರಂಪ್ ಆಧಾರರಹಿತ ಚುನಾವಣಾ ಅಕ್ರಮ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries