ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸೆಕ್ಟರಲ್ ಅಧಿಕಾರಿಗಳಿಗೆ ಡಿ.30 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಂಗಣದಲ್ಲಿ ತರಬೇತಿ ಜರುಗಲಿದೆ. ಚುನಾವಣೆ ಪ್ರಕ್ರಿಯೆಗಳು ಕೋವಿಡ್ ಸಂಹಿತೆ, ಪೆÇೀಲ್ ಮೆನೆಜರ್ ಆಪ್, ಇ.ವಿ.ಎಂ. ಸೆಟ್ಟಿಂಗ್ ಇತ್ಯಾದಿಗಳ ಮೂಲಕ ತರಬೇತಿ ನಡೆಯಲಿದೆ ಎಂದು ಟ್ರೈನಿಂಗ್ ನೋಡೆಲ್ ಅಧಿಕಾರಿ ಕೆ. ಬಾಲಕೃಷ್ಣನ್ ತಿಳಿಸಿದರು.
ಪ್ರಿಸೈಡಿಂಗ್ ಅಧಿಕಾರಿಗಳಿಗೆ ಮತ್ತು ಫಸ್ಟ್ ಪೆÇೀಲಿಂಗ್ ಆಫೀಸರ್ ಗಳಿಗೆ ತರಬೇತಿ ಡಿ. 1ರಂದು ಆರಮಭಗೊಳ್ಳಲಿದೆ. ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ, ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೆ , ಮಂಜೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಕುಂಬಳೆ ಸರಕಾರಿ ಹೈಯರ್ ಸೆಕೆಮಡರಿ ಸಾಲೆಯಲ್ಲೂ, ಕಾರಡ್ಕ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್,ನಲ್ಲೂ, ಪರಪ್ಪ ಬ್ಲೋಕ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಪರಪ್ಪ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಡಿ.1,2ರಂದು ತರಬೇತಿ ನಡೆಯಲಿದೆ.