ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್( ಆರ್‌ಬಿಐ) ಹೊಸ ಸಾಧನೆ ಮಾಡಿದೆ. ವಿಶ್ವದಲ್ಲಿ ಯಾವುದೇ ದೇಶದ ಕೇಂದ್ರಿಯ ಬ್ಯಾಂಕ್ ಕೂಡಾ ಈ ಸಾಧನೆ ಮಾಡಿಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರಲ್ಲಿ ಆರ್‌ಬಿಐ 10 ಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದೆ.
ಈ ಮೂಲಕ ಈ ಮೈಲಿಗಲ್ಲು ದಾಟಿದ ಮೊದಲ ಬ್ಯಾಂಕ್ ಎನಿಸಿಕೊಂಡಿದೆ. ಯುಎಸ್ ಫೆಡರಲ್ ಬ್ಯಾಂಕ್ 6,77,000 ಹಿಂಬಾಲಕರನ್ನು ಮಾತ್ರ ಹೊಂದಿದೆ.
ಆರ್‌ಬಿಐ ಇಂದು ಹೊಸ ದಾಖಲೆ ಬರೆದಿದೆ. ಟ್ವಿಟ್ಟರಲ್ಲಿ 1 ಮಿಲಿಯನ್ ಹಿಂಬಾಲಕರನ್ನು ಗಳಿಸಿ ಹೊಸ ಮೈಲಿಗಲ್ಲು ದಾಟಿದೆ. ನನ್ನ ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಟ್ವೀಟ್ ಮಾಡಿದ್ದಾರೆ.
ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 5.9 ಲಕ್ಷ ಹಿಂಬಾಲಕರನ್ನು ಹೊಂದಿದೆ. ಬ್ರೆಜಿಲ್ ಸೆಂಟ್ರಲ್ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ 3.17 ಲಕ್ಷ ಹಿಂಬಾಲಕರು ಹಾಗೂ ಕೆನಡಾ ಬ್ಯಾಂಕ್ 1.8 ಲಕ್ಷ ಹಾಗೂ ಬ್ಯಾಂಕ್ ಆಫ್ ಆಸ್ಟ್ರೇಲಿಯಾ 49,200 ಹಿಂಬಾಲಕರನ್ನು ಮಾತ್ರ ಗಳಿಸಿದೆ ಎಂದು ಟ್ವಿಟ್ಟರ್ ಅಂಕಿ ಅಂಶದಂದ ತಿಳಿದು ಬಂದಿದೆ.
ಇದೇ ರೀತಿ ಬ್ಯಾಂಕ್ ಆಫ್ ಫ್ರಾನ್ಸ್, ಡ್ಯುಯೆಚ್ ಬುಂಡೆಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಜಪಾನ್ ಕ್ರಮವಾಗಿ 37,100, 30,000 ಹಾಗೂ 28,900 ಹಿಂಬಾಲಕರನ್ನು ಹೊಂದಿವೆ. ಬ್ಯಾಂಕ್ ಆಫ್ ಸ್ಪೇನ್ 15, 900 ಹಾಗೂ ಬ್ಯಾಂಕ್ ಆಫ್ ಇಟಲಿ 14,500 ಹಿಂಬಾಲಕರನ್ನು ಗಳಿಸಿವೆ.