ಮುಳ್ಳೇರಿಯ: ಫ್ಲವರ್ಸ್ ಟಿವಿ ಕಾಮಿಡಿ ಉತ್ಸವಂ ವಲ್ರ್ಡ್ ಗಿನ್ನೆಸ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನೆಸ್ ಸರ್ಟಿಫಿಕೇಟ್ ಹಾಗೂ ಪದಕ ಪಡೆದ ಸುರೇಶ್ ಯಾದವ್ ಜಯನಗರ ಅವರಿಗೆ ಕಾರಡ್ಕ ಪಂಚಾಯತಿ ವತಿಯಿಂದ ಗೌರವ ಫಲಕ ಇತ್ತು ಗೌರವಿಸಲಾಯಿತು. ಪಂಚಾಯತಿ ಕಾರ್ಯದರ್ಶಿ ನಂದ ಗೋಪಾಲ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಜನನಿ, ವಾರ್ಡ್ ಸದಸ್ಯರಾದ ಸುಜಲ, ಶ್ರೀವಿದ್ಯಾ, ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.