HEALTH TIPS

ಕೇರಳ: ಲಿಂಗಪರಿವರ್ತಿತ ಸಮುದಾಯದ ಏಕೈಕ ಅಭ್ಯರ್ಥಿ ಸ್ನೇಹಾ

        ತಿರುವನಂತಪುರ: ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 74,899 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಉತ್ತರ ಕೇರಳದ ಕಣ್ಣೂರಿನಿಂದ ಸ್ಪರ್ಧಿಸುತ್ತಿರುವ ಕೆ.ಸ್ನೇಹಾ ಎಂಬುವವರು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಕೈಕ ಲಿಂಗಪರಿವರ್ತಿತ ವ್ಯಕ್ತಿಯಾಗಿದ್ದಾರೆ.

        ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿರುವ ಸ್ನೇಹಾ, ಅಭಿವೃದ್ಧಿ ಹಾಗೂ ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಮುಖ ರಾಜಕೀಯ ಪಕ್ಷಗಳನ್ನು ಎದುರಿಸುತ್ತಿದ್ದಾರೆ.

        'ನಾನು ಅಭಿವೃದ್ಧಿ ಹಾಗೂ ಇತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವ ಕಾರಣದಿಂದ ಸಾಕಷ್ಟು ಪ್ರತಿರೋಧವನ್ನು ಎದುರಿಸುತ್ತಿದ್ದೇನೆ' ಎಂದು ಕೆ.ಸ್ನೇಹಾ ಹೇಳುತ್ತಾರೆ.

ಅವರು ಕಣ್ಣೂರು ಪಾಲಿಕೆಯ ವಾರ್ಡ್‌ ನಂ. 36ರಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದಾರೆ. ಅದೇ ವಾರ್ಡ್‌ನ ನಿವಾಸಿ ಆಗಿರುವ ಕಾರಣ, ಸ್ನೇಹಾ ಅವರು ಮತದಾರರಿಗೆ ಪರಿಚಿತರೂ ಆಗಿದ್ದಾರೆ.

ವರ್ಷದ ಹಿಂದೆ ಅವರು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 'ನಾನು ಲಿಂಗಪರಿವರ್ತನೆ ಮಾಡಿಕೊಂಡಿರುವ ಕಾರಣ, ಈ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ವಿವಿಧ ಪಕ್ಷಗಳಿಂದ ಸಾಕಷ್ಟು ವಿರೋಧ ಎದುರಿಸಬೇಕಾಯಿತು' ಎಂದು ಸ್ನೇಹಾ ಹೇಳಿದರು.

       'ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಬೇರೆ ಇದೆ. ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ನನ್ನ ಹೆಸರನ್ನು ಬದಲಿಸಿಕೊಂಡೆ. ಇದೇ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸುವುದಕ್ಕೆ ವಿರೋಧ ವ್ಯಕ್ತವಾಯಿತು. ಆದರೆ, ಈ ಪ್ರತಿರೋಧವನ್ನು ಸಮರ್ಥವಾಗಿ ಎದುರಿಸಿ, ನಾನು ನಾಮಪತ್ರ ಸಲ್ಲಿಸಿದ್ದೇನೆ' ಎಂದು ಅವರು ಹೆಮ್ಮೆಯಿಂದ ಹೇಳಿದರು.

      ರಾಜ್ಯದಲ್ಲಿ 2.76 ಕೋಟಿ ಮತದಾರರಿದ್ದಾರೆ. ಈ ಪೈಕಿ ಲಿಂಗಪರಿವರ್ತಿತ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಕೇವಲ 282.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries