HEALTH TIPS

ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ನನ್ನನ್ನು ಬಲಿಪಶು ಮಾಡಿದೆ-ಎಂ.ಸಿ.ಖಮರುದ್ದೀನ್ ಆರೋಪ-ಬಂಧನವು ರಾಜಕೀಯ ಪ್ರೇರಿತ- ಯುಡಿಎಫ್

                  

        ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹಗರಣದಲ್ಲಿ ಶಾಸಕ ಎಂ.ಸಿ ಖಮರುದ್ದೀನ್ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಯುಡಿಎಫ್ ಹೇಳಿದೆ. ಎಂ.ಸಿ.ಖಮರುದ್ದೀನ್ ಅವರ ಬಂಧನವು ರಾಜಕೀಯ ಪ್ರೇರಿತವಾಗಿದೆ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಕ್ರಮ ರಾಜಕೀಯ ಪ್ರೇರಿತ ಎಂದು ಟೀಕಿಸಿರುವರು. 

      ಫ್ಯಾಷನ್ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಿಂದ 13 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಎಂ.ಸಿ ಖಮರುದ್ದೀನ್ ಅವರನ್ನು ಇಂದು ಬಂಧಿಸಲಾಗಿದೆ. ಖಮರುದ್ದೀನ್ ವಿರುದ್ಧ ಜಾಮೀನು ರಹಿತ ದೂರು ದಾಖಲಿಸಲಾಗಿದೆ. ಇಂದು ನಡೆದ ವಿಸ್ಕøತ ವಿಚಾರಣೆ ಬಳಿಕ ಬಂಧಿಸಲ್ಪಟ್ಟ ಎಂ.ಸಿ.ಖಮರುದ್ದೀನ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು  ಎಂದು ವರದಿಯಾಗಿದೆ.

      ಚಂದೇರಾ ಪೆÇಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ಆರೋಪಗಳ ಮೇಲೆ ಎಂ.ಸಿ ಖಮರುದ್ದೀನ್ ಅವರನ್ನು ಬಂಧಿಸಲಾಯಿತು. ಹೊಸದುರ್ಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತೆಂದು ವರದಿಯಾಗಿದೆ. ಆದರೆ, ಇದು ಸಿವಿಲ್ ಪ್ರಕರಣವಾಗಿದ್ದು, ವಂಚನೆ ಆರೋಪ ಹೇರಲಾಗದು ಎಂದು ಖಮರುದ್ದೀನ್ ಪರ ವಕೀಲರು ಹೇಳಿದ್ದಾರೆ. ಎಂಸಿ ಖಮರುದ್ದೀನ್ ವಿರುದ್ಧ ಈವರೆಗೆ ಅಧಿಕೃತವಾಗಿ 77 ಪ್ರಕರಣಗಳು ದಾಖಲಾಗಿವೆ.

        ವರದಿಗಳ ಪ್ರಕಾರ, ಚಿನ್ನದ ವ್ಯಾಪಾರ ಮಾಡುವ ಜುವೆಲ್ಲರಿಗಳಲ್ಲಿ ಇಂತಹ ಹೂಡಿಕೆ ಮಾಡುವುದು ಭಾರತೀಯ ರಿಸರ್ವ್ ಬ್ಯಾಂಕ್‍ನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತನಿಖಾ ತಂಡ ಬೊಟ್ಟುಮಾಡಿದೆ. ಶಾಸಕರ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 

     ಏತನ್ಮಧ್ಯೆ, ಎಂ.ಸಿ ಖಮರುದ್ದೀನ್ ಅವರು ಪೆÇಲೀಸ್ ವಾಹನ ಏರುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಸರ್ಕಾರವು ತನ್ನನ್ನು  ಬಲಿಪಶು ಮಾಡಿದೆ ಮತ್ತು ತನ್ನನ್ನು ರಾಜಕೀಯವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ಸರ್ಕಾರ ತನ್ನದೇ  ತಪ್ಪುಗಳನ್ನು ಮುಚ್ಚಿಡಲು ನನ್ನನ್ನು ಬಲಿತೆಗೆಯುತ್ತಿದೆ ಎಂದು ಹೇಳಿದರು. ಪ್ರಕರಣವನ್ನು ನ್ಯಾಯಾಲಯ ಸೋಮವಾರ ಪರಿಗಣಿಸಲಿದೆ. ಆದರೂ ಪೆÇಲೀಸರು ಸೋಮವಾರದ ವರೆಗೆ ಕಾಯದಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. "ನನ್ನನ್ನು ಬೇಟೆಯಾಡಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಪೆÇಲೀಸ್ ವಾಹನದ ಒಳಗಿನಿಂದ ಹೇಳಿದರು. 

     ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಸಮರಸ ಸುದ್ದಿಯೊಂದಿಗೆ ಪ್ರತಿಕ್ರಿಯಿಸಿ ಕಾನೂನು ಕಾನೂನಿನ ಹಾದಿಯಲ್ಲಿ ಸಾಗಬೇಕು ಎಂದಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries