ತಿರುವನಂತಪುರ: ವಿವಾದಗಳು ಬುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯಾದ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನ್ನು ಐಟಿ ಯೋಜನೆಗಳಿಂದ ರಾಜ್ಯ ಸರ್ಕಾರ ನಿಷೇಧಿಸಿದೆ. ಪಿಡಬ್ಲ್ಯುಸಿಯನ್ನು ಸರ್ಕಾರ ಎರಡು ವರ್ಷಗಳ ಕಾಲ ನಿಷೇಧಿಸಿದೆ. ಕಳೆದ ಶುಕ್ರವಾರ ಈ ಆದೇಶ ಹೊರಡಿಸಲಾಗಿದೆ.
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಸ್ಪೇಸ್ ಪಾರ್ಕ್ ನಲ್ಲಿ ನೇಮಕಾತಿ ನಡೆಸಿದ ಸಂಬಂಧ ಕನ್ಸಲ್ಟೆನ್ಸಿಯನ್ನು ನಿಷೇಧಿಸಲಾಗಿದೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ. ಇದೇ ವೇಳೆ ಸರ್ಕಾರದ ಆದೇಶದಲ್ಲಿ ಸ್ವಪ್ನಾ ಸುರೇಶ್ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ನಿಷೇಧವನ್ನು 'ಅನರ್ಹ ವ್ಯಕ್ತಿಯನ್ನು' ನೇಮಕ ಮಾಡಿದ ಬಗ್ಗೆ ಎಂದು ವರದಿ ಮಾಡಿದೆ.
ಕೆಎಸ್‍ಇಬಿ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ಕೆಫಾನ್ ಯೋಜನೆಯ ಸಲಹಾ ಜವಾಬ್ದಾರಿಯನ್ನು ಪಿಡಬ್ಲ್ಯೂಸಿ ವಹಿಸಿತ್ತು. ಆದರೆ ಅದರ ಕರಾರು ನಿನ್ನೆ ಕೊನೆಗೊಂಡಿದೆ. ಈ ಸಂದರ್ಭದಲ್ಲಿ, ಕಂಪನಿಯು ಒಪ್ಪಂದವನ್ನು ನವೀಕರಿಸಲು ನಿರಾಕರಿಸಲಾಯಿತು.
ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ಸಂಸ್ಥೆಯೊಂದಿಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿದೆ. ಆದರೆ ಕಂಪನಿಯು ಒಪ್ಪಂದವನ್ನು ಅನುಸರಿಸಲು ವಿಫಲವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ಸ್ವಾಪ್ನಾ ಸುರೇಶ್ ಅವರ ನೇಮಕದಲ್ಲಿ ಇದು ನೇರವಾಗಿ ಭಾಗಿಯಾಗಿಲ್ಲ ಮತ್ತು ಸ್ವಪ್ನಾಳನ್ನು ವಿಷನ್ ಟೆಕ್ನಾಲಜೀಸ್ ನೇಮಕ ಮಾಡಿದೆ ಎಂದು ಪಿಡಬ್ಲ್ಯೂಸಿ ಈ ಹಿಂದೆ ತಿಳಿಸಿತ್ತು. 2014 ರಿಂದ ಕಂಪನಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಪಿಡಬ್ಲ್ಯೂಸಿ ಹೇಳಿದೆ. ಆದರೆ ಸರ್ಕಾರಕ್ಕಿದು ಇಂತಹದೊಂದು ಸವಾಲು ಮೊದಲ ಅನುಭವವಾಗಿದೆ.