ಕಾಸರಗೋಡು: ಶಿಶು ದಿನಾಚರಣೆ ಅಂಗವಾಗಿ ನ.4ರಂದು ಕಾಸರಗೋಡು ಜಿಲ್ಲಧಿಕಾರಿ ಕಚೇರಿ ಕಿರುಭಾಂಗಣದಲ್ಲಿ ನಡೆಯುವ ವಿದ್ಯಾರ್ಥಿಗಳ ಸಂಸತ್ತು ಕಾರ್ಯಕ್ರಮಕ್ಕೆ ಸದಸ್ಯರ ಆಯ್ಕೆ ಸಂಬಂಧ ಜಿಲ್ಲೆಯ 4 ರಿಂದ 7 ನೇ ತರಗತಿ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ ನಡೆಯಲಿದೆ. ಕನ್ನಡ ವಿಬಾಗದಿಂದ 2, ಮಲೆಯಾಲಂ ವಿಭಾಗದಿಂದ ಮೂವರನ್ನು ಆಯ್ಕೆ ಮಾಡಲಾಗುವುದು. ಆಸಕ್ತ ವಿದ್ಯಾರ್ಥಿಗಳಲ್ಲಿ ಕನ್ನಡ ವಿಭಾಗದವರು 9745372878 ಮತ್ತು ಮಲೆಯಾಳಂ ವಿಭಾಗದವರು 9605593458 ಎಂಬ ದೂರವಾಣಿ
ಸಂಖ್ಯೆಗೆ ಕರೆಮಾಡಿ ತಮ್ಮ ಹೆಸರು, ವಾಟ್ಸ್ ಆಪ್ ನಂಬ್ರ ಸಹಿತ ನೋಂದಣಿ ನಡೆಸಬೇಕು. ನ.5 ಕೊನೆಯ ದಿನಂಕವಾಗಿದೆ. ಸ್ಪರ್ಧೆ ನಡೆಯಲಿರುವ ನ.7ರಂದು ಬೆಳಗ್ಗೆ 10.30ಕ್ಕೆ ವಾಟ್ಸ್ ಆಪ್ ಗುಂಪುಗಳ ಮೂಲಕ ಸ್ಪರ್ಧೆಯ ವಿಷಯ ಸೂಚಿಸಲಾಗುವುದು.